ನಮ್ಮ ಕೆಟ್ಟ ಜೀವನಶೈಲಿ, ಎಣ್ಣೆಯುಕ್ತ ಆಹಾರ, ಪ್ರದೂಷಣೆ ಕಾರಣ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಮೊಡವೆಯನ್ನು ಪದೇ ಪದೇ ಮುಟ್ಟುವುದು, ಒಡೆಯುವುದು ಮುಂತಾದ ಅಭ್ಯಾಸ ನಿಮಗೂ ಇದ್ದರೆ ಹಾಗೆ ಮಾಡಲು ಹೋಗಬೇಡಿ.
ಮೊಡವೆಯನ್ನು ಮುಟ್ಟುತ್ತಿದ್ದರೆ, ಒಡೆದರೆ ಮೊದವೆಯ ಕಲೆ ಹಾಗೆಯೇ ಉಳಿದುಕೊಳ್ಳುತ್ತದೆ.
ಇನ್ನು ಮೊಡವೆಗೆ ಉಗುರು ತಾಗಿಸಿದರೆ ಅದು ಕಡಿಮೆಯಾಗುವ ಬದಲು ಹೆಚ್ಚಾಗುತ್ತಾ ಹೋಗುತ್ತದೆ.
ಮೊಡವೆಯನ್ನು ಒಡೆಯುವುದರಿಂದ ತುರಿಕೆ, ಕೆಂಪು ಕಲೆ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ.
ಮೊಡವೆಯನ್ನು ಒಡೆಯುವುದರಿಂದ ಅದರ ನೀರು ಮುಖದಲ್ಲಿ ಹರಡಿ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ.
ಮೊಡವೆಯನ್ನು ಉಗುರಿನಿಂದ ಒಡೆಯುವುದರಿಂದ ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಮೊಡವೆ ಆಗದಂತೆ ತಡೆಯಲು ಮುಖವನ್ನು ದಿನಕ್ಕೆ ಎರಡು ಬಾರಿ ಸಾಬೂನು ಅಥವಾ ಫೇಸ್ ವಾಶ್ ಹಾಕಿ ಚೆನ್ನಾಗಿ ತೊಳೆಯಬೇಕು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ