ಬೆಳಗೆದ್ದು ಈ ಪಾನೀಯಗಳನ್ನು ಕುಡಿದ್ರೆ ಸಲೀಸಾಗಿ ಕರಗುತ್ತೆ ಯೂರಿಕ್ ಆಸಿಡ್

Yashaswini V
Nov 15,2024

ಯೂರಿಕ್ ಆಸಿಡ್

ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಕೀಲುಗಳಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ.

ಯೂರಿಕ್ ಆಸಿಡ್ ಗೆ ಮನೆಮದ್ದು

ಬೆಳಗ್ಗೆ ಎದ್ದ ಕೂಡಲೇ ಕೆಲವು ಪಾನೀಯಗಳನ್ನು ಕುಡಿಯುದರಿಂದ ಕೀಲುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್ ನೀರಾಗಿ ಕರಗುತ್ತದೆ.

ಎಳನೀರು

ಎಳನೀರಿನಲ್ಲಿ ಕಂಡು ಬರುವ ಪೊಟ್ಯಾಸಿಯಮ್ ದೇಹದಲ್ಲಿ ಯೂರಿಕ್ ಆಸಿಡ್ ಅನ್ನು ಕರಗಿಸಲು ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದೆ.

ಲೆಮನ್ ವಾಟರ್

ಬೆಳಗೆದ್ದು ಬೆಚ್ಚಗಿನ ನೀರಿನಲ್ಲಿ ಒಂದು ಓಳು ನಿಂಬೆ ರಸವನ್ನು ಹಿಂಡಿ ಕುಡಿದರೆ ಯೂರಿಕ್ ಆಮ್ಲ ಕರಗಿ ನೀರಾಗಿ ಹೋಗುತ್ತದೆ.

ಅರಿಶಿನ ಟೀ

ಹಾಲು ಬೆರಸದೆ ನೀರಿನಲ್ಲಿ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಯೂರಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ.

ಶುಂಠಿ ಟೀ

ಶುಂಠಿ ಟೀ ಸೇವನೆಯಿಂದ ಕೀಲುಗಳಲ್ಲಿ ಹೆಪ್ಪುಗಟ್ಟಿರುವ ಯೂರಿಕ್ ಆಮ್ಲವನ್ನು ಸುಲಭವಾಗಿ ಕರಗಿಸಬಹುದು.

ಮೆಂತ್ಯ ನೀರು

ರಾತ್ರಿ ಒಂದು ಲೋಟ ನೀರಿನಲ್ಲಿ 1 ಚಮಚ ಮೆಂತ್ಯ ಕಾಳುಗಳನ್ನು ನೆನೆಸಿಟ್ಟು ಬೆಳಿಗ್ಗೆ ನೀರನ್ನು ಶೋಧಿಸಿ ಕುಡಿದರೆ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.

ತುಳಸಿ ರಸ

ಒಂದು ಲೋಟ ನೀರಿನಲ್ಲಿ 10 ತುಳಸಿ ದಳಗಳನ್ನು ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ಯೂರಿಕ್ ಆಸಿಡ್ ಕರಗಿಸುವಲ್ಲಿ ಇದು ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story