ಬೆಟ್ಟದ ನೆಲ್ಲಿಕಾಯಿ.. ಚಳಿಗಾಲದ ಈ ಸೋಂಕುಗಳಿಗೆ ಒಂದೇ ಮದ್ದು!
ಬೆಟ್ಟದ ನೆಲ್ಲಿಕಾಯಿ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ.
ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆಮ್ಲಾವನ್ನು ಚಳಿಗಾಲದ ಸೂಪರ್ ಫುಡ್ ಎಂದೂ ಕರೆಯಬಹುದು.
ಇದು ಕರುಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಬೆಟ್ಟದ ನೆಲ್ಲಿಕಾಯಿ ಚಯಾಪಚಯವನ್ನು ಸುಧಾರಿಸುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿಯುವುದು ದೇಹಕ್ಕೆ ಹಲವು ಪರಯೋಜಗಳನ್ನು ನೀಡುತ್ತದೆ.
ಪ್ರತಿನಿತ್ಯ ಆಮ್ಲಾ ತಿನ್ನುವುದರಿಂದ ಆರೋಗ್ಯ ಮಾತ್ರವಲ್ಲದೇ ಸೌಂದರ್ಯವೂ ವೃದ್ಧಿಸುತ್ತದೆ.
ಆಮ್ಲಾದಲ್ಲಿರುವ ಗುಣಗಳು ನಮ್ಮ ಕೂದಲನ್ನು ದಪ್ಪವಾಗಿಸುವುದು ಮಾತ್ರವಲ್ಲದೆ ನಯವಾಗಿಯೂ ಇಡುತ್ತವೆ.
ಚಳಿಗಾಲದಲ್ಲಿ ಯಾವುದೇ ಸೋಂಕುಗಳು ನಿಮ್ಮನ್ನು ಬಾಧಿಸದಿರಲು ಆಮ್ಲಾ ಜ್ಯೂಸ್‌ನ್ನು ದೈನಂದಿನ ಆಹಾರದ ಭಾಗವಾಗಿ ಮಾಡಿ.