ಕೂದಲ ಆರೈಕೆಗಾಗಿ ಶಾಂಪೂ ಬದಲಿಗೆ ಈ 10 ವಸ್ತುಗಳನ್ನು ಬಳಸಿ

Yashaswini V
Oct 31,2023

ಕೂದಲ ಆರೈಕೆ

ಆರೋಗ್ಯಕರ ಉದ್ದವಾದ, ಬಲಶಾಲಿಯಾದ ಕೂದಲೆಂದರೆ ಪ್ರತಿಯೊಬ್ಬರಿಗೂ ಪ್ರಿಯ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ, ರಾಸಾಯನಿಕಾಯುಕ್ತ ಶಾಂಪೂವಿಗೆ ಹೇಳಿ ಗುಡ್ ಬೈ. ಆರೋಗ್ಯಕರ ಕೂದಲಿಗಾಗಿ ಶಾಂಪೂ ಬದಲಿಗೆ 10 ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ. ಅವುಗಳೆಂದರೆ...

ಮೆಂತ್ಯ

ನಾಲ್ಕೈದು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿ, ಬೆಳಗ್ಗೆ ಅದರ ಪೇಸ್ಟ್ ತಯಾರಿಸಿ. ಇದರೊಂದಿಗೆ ಮೊಸರು ಬೆರೆಸಿ ಕೂದಲಿಗೆ ಹಚ್ಚಿ. ಒಂದು ಗಂಟೆ ಬಳಿಕ ಹೇರ್ ವಾಶ್ ಮಾಡಿ. ಇದರಿಂದ ಕಾಂತಿಯುತ ಕೂದಲನ್ನು ನಿಮ್ಮದಾಗಿಸಬಹುದು.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ನಿಂದ ಕೂದಲನ್ನು ಶುಚಿಗೊಳಿಸುವುದರಿಂದ ಕೂದಲಿನ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುವುದರ ಜೊತೆಗೆ ಕೂದಲ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ.

ಮುಲ್ತಾನಿ ಮಿಟ್ಟಿ

ಉತ್ತಮ ಸೌಂದರ್ಯವರ್ಧಕ ಎಂತಲೇ ಕರೆಯಲ್ಪಡುವ ಮುಲ್ತಾನಿ ಮಿಟ್ಟಿ ಪ್ಯಾಕ್ ಬಳಕೆಯಿಂದ ಕೂದಲ ಹಲವು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಂಬಲಾಗಿದೆ.

ಕಡಲೆ ಹಿಟ್ಟು

ಪ್ರೊಟೀನ್ ಸಮೃದ್ಧವಾದ ಕಡಲೆ ಹಿಟ್ಟನ್ನು ಬಳಸಿ ಹೇರ್ ವಾಶ್ ಮಾಡುವುದರಿಂದ ಇದು ಕೂದಲನ್ನು ಶುಚಿಗೊಳಿಸುವುದರ ಜೊತೆಗೆ ಕೂದಲಿನ ಬೆಳವಣಿಗೆಗೂ ಪ್ರಯೋಜನಕಾರಿ ಆಗಿದೆ.

ಅಲೋವೆರಾ

ಅಲೋವೆರಾ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಇದರ ಬಳಕೆಯಿಂದ ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ಕೂದಲಿನ ಬುಡವನ್ನು ಬಲಪಡಿಸುತ್ತದೆ.

ಮೊಸರು

ಮೊಸರಿನೊಂದಿಗೆ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಇದು ಉತ್ತಮ ಕಂಡೀಷನರ್ ಆಗಿ ಕೆಲಸಮಾಡುತ್ತದೆ.

ಎಳನೀರು

ಎಳನೀರು ಕೂದಲಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ನಿಮ್ಮ ಕೂದಲಿನ ಪ್ರಕಾರಕ್ಕೆ ಅನುಗುಣವಾಗಿಯೇ ಎಳನೀರನ್ನು ಬಳಸುವುದರಿಂದ ಇದು ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನೆಲ್ಲಿಕಾಯಿ

ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ನೆಲ್ಲಿಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಸಿ ಕಂಡುಬರುತ್ತದೆ. ಇದು ನೆತ್ತಿಯ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುವುದರ ಜೊತೆಗೆ ಕೂದಲ ಬೆಳವಣಿಗೆಯಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ.

ಅಂಟವಾಳ

ಅಂಟವಾಳದ ಕಾಯಿಯನ್ನು ಪುಡಿಮಾಡಿ ಕೊಬ್ಬರಿ ಎಣ್ಣೆ ಮತ್ತು ಭೃಂಗರಾಜದಲ್ಲಿ ಮಿಶ್ರಣ ಮಾಡಿ ಕುದಿಸಿ ಕೂದಲಿಗೆ ಹಚ್ಚಿ ಎರಡು ಗಂಟೆಗಳ ಬಳಿಕ ಹೇರ್ ವಾಶ್ ಮಾಡಿ. ಇದು ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಸೀಗೆಕಾಯಿ

ಸೀಗೆಕಾಯಿ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಇದು ಸೋಂಕುಗಳಿಂದ ರಕ್ಷಿಸಿ ಬುಡದಿಂದ ಕೂದಲನ್ನು ಪೋಷಿಸುತ್ತದೆ. ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story