ವಾರಕ್ಕೆ ಒಂದು ಗ್ಲಾಸ್ ಕಬ್ಬಿನ ಹಾಲು… ಈ ಕಾಯಿಲೆಗಳಿಂದ ಸಿಗುತ್ತೆ ಪರ್ಮನೆಂಟ್ ರಿಲೀಫ್

Bhavishya Shetty
Dec 25,2023

ಬೆಸ್ಟ್ ಜ್ಯೂಸ್

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದರ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಬೆಸ್ಟ್ ಜ್ಯೂಸ್ ಎಂದರೆ ಕಬ್ಬಿನ ಹಾಲು.

ಪೋಷಕಾಂಶಗಳು

ಕಬ್ಬಿನ ರಸವು ನೈಸರ್ಗಿಕ ಪಾನೀಯವಾಗಿದ್ದು ಇದರಲ್ಲಿ ಯಾವುದೇ ಕೊಲೆಸ್ಟ್ರಾಲ್ ಇರುವುದಿಲ್ಲ. ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಕಬ್ಬಿನ ರಸದಲ್ಲಿ ಕಂಡುಬರುತ್ತವೆ.

ರಕ್ತಹೀನತೆ

ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ, ಕಬ್ಬಿನ ರಸವು ನಿಮ್ಮನ್ನು ಕ್ಯಾನ್ಸರ್’ನಿಂದ ರಕ್ಷಿಸಲು, ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು, ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಹೆಚ್ಚಿಸಲು, ಮೂಳೆಗಳನ್ನು ಬಲಪಡಿಸಲು ಮತ್ತು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ತ್ವರಿತ ಶಕ್ತಿ

ಕಬ್ಬಿನ ರಸವು ರುಚಿಕರ ಮಾತ್ರವಲ್ಲ, ಇದನ್ನು ಕುಡಿಯುವುದರಿಂದ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.

ಯಕೃತ್ತಿನ ಕಾರ್ಯನಿರ್ವಹಣೆ

NCBIನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಬ್ಬಿನ ರಸವು ವಿಟಮಿನ್’ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಯಕೃತ್ತಿನ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯಕವಾಗಿದೆ.

ಕ್ಯಾನ್ಸರ್ ವಿರೋಧಿ

ಕಬ್ಬಿನ ರಸದಲ್ಲಿರುವ ಪಾಲಿಫಿನಾಲ್’ಗಳು ಹೆಚ್ಚಿನ ಉತ್ಕರ್ಷಣ ನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ ಎಂದು ಅಧ್ಯಯನಗಳು ತೋರಿಸಿವೆ. ಇದೇ ಕಾರಣಕ್ಕೆ ಕಬ್ಬಿನ ರಸಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಇದೆ.

ಜೀರ್ಣಾಂಗ ವ್ಯವಸ್ಥೆ

ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿದ್ದರೆ, ಕಬ್ಬಿನ ಹಾಲನ್ನು ಕುಡಿಯಬೇಕು. ಕಬ್ಬಿನ ರಸದಲ್ಲಿರುವ ಪೊಟ್ಯಾಸಿಯಮ್ ಹೊಟ್ಟೆಯಲ್ಲಿನ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.

ಮಧುಮೇಹ

ಕಬ್ಬಿನ ರಸವು ಸಕ್ಕರೆಯನ್ನು ಹೊಂದಿದ್ದರೂ, ಸೀಮಿತ ಪ್ರಮಾಣದಲ್ಲಿ ಅದರ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಎನ್’ಸಿಬಿಐ (ರೆಫ್) ವರದಿಯ ಪ್ರಕಾರ, ನೈಸರ್ಗಿಕ ಸಕ್ಕರೆಯು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದನ್ನು ತಡೆಯುತ್ತದೆ.

ಮೂತ್ರಪಿಂಡದ ಆರೋಗ್ಯ

ಕಬ್ಬಿನ ರಸವು ಯಾವುದೇ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಿಲ್ಲ. ತುಂಬಾ ಕಡಿಮೆ ಸೋಡಿಯಂ ಪ್ರಮಾಣವಿದ್ದು, ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಬಾಯಿಯ ದುರ್ವಾಸನೆ

ಕಬ್ಬಿನ ಹಾಲು ದೇಹದ ಉರಿಯೂತ, ಯುಟಿಐ, ಮೂತ್ರಪಿಂಡದ ಕಲ್ಲುಗಳು ಮತ್ತು ಪ್ರೋಸ್ಟಟೈಟಿಸ್’ನಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಅಂಶವು ಮೂಳೆಗಳ ಬೆಳವಣಿಗೆ ಮತ್ತು ಬಲಕ್ಕೆ ಅವಶ್ಯಕವಾಗಿದೆ. ಜೊತೆ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

VIEW ALL

Read Next Story