ಬದನೆಕಾಯಿ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಬದನೆಕಾಯಿ ತಿನ್ನುವುದು ತುಂಬಾ ಒಳ್ಳೆಯದು.
ನಾರಿನಂಶವಿರುವ ಬದನೆಕಾಯಿಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.
ಬದನೆಕಾಯಿ ಸೇವನೆಯು ಆಘಾತಗಳಿಂದ ಹೃದಯವನ್ನು ರಕ್ಷಿಸುತ್ತದೆ.
ಬದನೆಕಾಯಿಯಲ್ಲಿ ಪಾಲಿಫಿನಾಲ್ ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಕಾರಿ.
ಬದನೆ ತಿನ್ನುವುದರಿಂದ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳು ಸಿಗುತ್ತವೆ.
ನಿಯಮಿತವಾಗಿ ಬದನೆಕಾಯಿ ಸೇವಿಸುವುದರಿಂದ ಮೂಳೆಗಳು ಆರೋಗ್ಯವಾಗಿರುತ್ತವೆ.
ಬಿಳಿಬದನೆಯಲ್ಲಿ ರೋಗ ನಿರೋಧಕಗಳು ಹೇರಳವಾಗಿದ್ದು, ಕ್ಯಾನ್ಸರ್ ಕೋಶಗಳನ್ನು ತೆಗೆದುಹಾಕುತ್ತದೆ.