ಕೊತ್ತಂಬರಿ ಕಾಳು ನೆನೆಸಿದ ನೀರು ಕುಡಿಯುವುದರಿಂದ ಹತ್ತು ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಕೊತ್ತಂಬರಿ ಕಾಳು ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.
ವೈದ್ಯರು ಮಧುಮೇಹಿಗಳಿಗೆ ಕೊತ್ತಂಬರಿಯನ್ನು ಹೆಚ್ಚಾಗಿ ಬಳಸಲು ಸೂಚಿಸುತ್ತಾರೆ.
ಕೊತ್ತಂಬರಿಗೆ ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಇದೆ.
ಕೊತ್ತಂಬರಿಯು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಕೊತ್ತಂಬರಿ ಕಾಳು ಸೇವನೆಯಿಂದ ಮೂಳೆಗಳು ಗಟ್ಟಿಮುಟ್ಟಾಗುತ್ತವೆ.
ಕೊತ್ತಂಬರಿ ಕಾಳು ಬೇಧಿ, ವಾಕರಿಕೆಯ ಲಕ್ಷಣಗಳಂಥ ಆರೋಗ್ಯ ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತದೆ.
ಕೊತ್ತಂಬರಿ ಕಾಳು ಅಜೀರ್ಣತೆ, ಅಸಿಡಿಟಿ ಸಮಸ್ಯೆ ನಿವಾರಿಸುತ್ತದೆ.