ಕರಿಬೇವು ಸೊಪ್ಪು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಕೇವಲ ಪರಿಮಳಕ್ಕಷ್ಟೇ ಅಲ್ಲ ಕರಿಬೇವಿನಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ.
ಕರಿಬೇವು ಕಬ್ಬಿಣದಂಶ ಹಾಗೂ ಪೋಲಿಕ್ ಆಸಿಡ್ಗಳಿಂದ ಸಮೃದ್ಧವಾಗಿದ್ದು, ರಕ್ತಹೀನತೆಗೆ ರಾಮಬಾಣ.
ಕರಿಬೇವು ಲಿವರ್ಗೆ ತುಂಬಾ ಒಳ್ಳೆಯದು. ಇದು ಲಿವರ್ ಹಾಳಾಗದಂತೆ ತಡೆಯುತ್ತದೆ.
ಆಂಟಿಬಯಾಟಿಕ್ ಆಗಿರುವ ಕರಿಬೇವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಹೃದಯ ಖಾಯಿಲೆಗಳಿಗೂ ರಾಮಬಾಣವಾಗಿರುವ ಕರಿಬೇವು ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ
ನಿಯಮಿತವಾಗಿ ಕರಿಬೇವು ಸೇವನೆಯಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
ದಟ್ಟ ಕೂದಲಿಗೆ, ಚರ್ಮದ ಸೋಂಕು ನಿವಾರಣೆಗೆ ಮತ್ತು ತೂಕ ಇಳಿಕೆಗೂ ಕರಿಬೇವು ಸಹಕಾರಿ.