ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುವ 10 ಪ್ರಮುಖ ಜ್ಯೂಸ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.
ಹಾಗಲ ಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.
ಮೆಗ್ನಿಶಿಯಂ ಭರಿತ ಪಾಲಕ್ ಜ್ಯೂಸ್ ಇನ್ಸುಲಿನ್ ಕ್ರಿಯೆಯನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಸೌತೆಕಾಯಿ ರಸ ಕೂಡಾ ಮಧುಮೇಹ ನಿಯಂತ್ರಿಸಲು ಸಹಕಾರಿ. ಇದು ತೂಕ ಇಳಿಕೆಗೆ ಕೂಡಾ ಲಾಭದಾಯಕ.
ಹಾಗಲಕಾಯಿ ಮತ್ತು ನೆಲ್ಲಿಕಾಯಿ ಬೆರೆಸಿ ಮಾಡಿದ ಜ್ಯೂಸ್ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.
ಸೋರೆಕಾಯಿ ಸಕ್ಕರೆ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಮಧುಮೇಹಿಗಳಿಗೆ ಬೆಸ್ಟ್ ಜ್ಯೂಸ್.
ಆಲೋವಿರಾ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಮತ್ತು ಜೀರ್ಣಕ್ರಿಯೆಗೆ ಸಹಕಾರಿ.
ಮೆಂತ್ಯೆ ಜ್ಯೂಸ್ ಇನ್ಸುಲಿನ್ ಸ್ರವಿಸುವಿಕೆಯನ್ನುಹೆಚ್ಚಿಸುತ್ತದೆ. ಮಧುಮೇಹದ ವಿರುದ್ದ ಹೋರಾಡಲು ಇದು ಬೆಸ್ಟ್ ಔಷಧ.
ಪೋಷಕಾಂಶಗಳಿಂದ ಸಮೃದ್ದವಾಗಿರುವ ಕ್ಯಾರೆಟ್ ಮಧುಮೇಹ ನಿಯಂತ್ರಣಕ್ಕೂ ಸಹಕಾರಿ.