ರೋಗನಿರೋಧಕ ಶಕ್ತಿ

ಅಂಜೂರದ ಹಣ್ಣಿನಲ್ಲಿ ವಿಟಮಿನ್ A ಮತ್ತು C ಅಧಿಕವಾಗಿರುವುದರಿಂದ ರೋಗನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.

ರಕ್ತ ವೃದ್ಧಿಯಾಗುತ್ತದೆ

ರಕ್ತಹೀನತೆ ಇರುವವರು ಪ್ರತಿನಿತ್ಯ 2-3 ಅಂಜೂರ ಹಣ್ಣುಗಳನ್ನು ಸೇವನೆ ಮಾಡುವುದರಿಂದ ರಕ್ತ ವೃದ್ಧಿಯಾಗುತ್ತದೆ.

ಕೆಮ್ಮು-ದಮ್ಮು

ಕೆಮ್ಮು-ದಮ್ಮು ಇರುವವರು ಪ್ರತಿನಿತ್ಯ ಅಂಜೂರ ಹಣ್ಣು ಸೇವಿಸಿವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಬಾಯಿ ಹುಣ್ಣು

ಹಾಲಿನಲ್ಲಿ ನೆನೆಸಿ ಅಂಜೂರ ಹಣ್ಣು ಸೇವಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

ಮೂಗಿನಲ್ಲಿ ರಕ್ತಸ್ರಾವ

ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಆಗಾಗ ಅಂಜೂರ ಹಣ್ಣನ್ನು ಸೇವಿಸುವುದರಿಂದ ಪರಿಹಾರ ದೊರೆಯುತ್ತದೆ.

ಮೂಲವ್ಯಾಧಿ

ರಾತ್ರಿ 3-5 ಅಂಜೂರದ ಹಣ್ಣನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಹಾಲು ಕುಡಿದರೆ ಮೂಲವ್ಯಾಧಿ ಗುಣವಾಗುತ್ತದೆ.

ಮಲಬದ್ಧತೆ

ನಾರಿನಾಂಶ ಅಧಿಕವಾಗಿರುವ ಅಂಜೂರದ ಹಣ್ಣು ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

ಮಾಸಿಕ ಒತ್ತಡ

ನಿಯಮಿತವಾಗಿ ಅಂಜೂರದ ಹಣ್ಣು ಸೇವಿಸಿದರೆ ಮಾಸಿಕ ಒತ್ತಡದಂತಹ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

VIEW ALL

Read Next Story