ಪೋಷಕಾಂಶ ಭರಿತ ಆಲೂಗಡ್ಡೆ ಜ್ಯೂಸ್ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ಆಲೂಗಡ್ಡೆ ಜ್ಯೂಸ್ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತದೆ ಜೊತೆಗೆ ಅನೇಕ ರೋಗಗಳನ್ನು ತಡೆಯಲು ಪ್ರಯೋಜನಕಾರಿ.
ಆಲೂಗಡ್ಡೆ ಜ್ಯೂಸ್ನಲ್ಲಿ ವಿಟಮಿನ್ ‘A’ ಮತ್ತು ವಿಟಮಿನ್ ‘B’ ಕಾಂಪ್ಲೆಕ್ಸ್ನಂತಹ ಪೋಷಕಾಂಶಗಳಿದ್ದು, ಇವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ.
ಆಲೂಗಡ್ಡೆ ಜ್ಯೂಸ್ ಮೈಗ್ರೇನ್ಗೆ ಕೂಡ ಉತ್ತಮ ಮನೆಮದ್ದಾಗಿದ್ದು, ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ.
ಆಲೂಗಡ್ಡೆ ಜ್ಯೂಸ್ ಒತ್ತಡ, ಆಯಾಸ ಮತ್ತು ಖಿನ್ನತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಆಲೂಗೆಡ್ಡೆಯ ಜ್ಯೂಸ್ ಕುಡಿಯುವುದರ ಜೊತೆಗೆ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವಿನ ಸಮಸ್ಯೆ ದೂರವಾಗುತ್ತದೆ.
ಆಲೂಗಡ್ಡೆಯಲ್ಲಿರುವ ಪೋಷಕಾಂಶಗಳು ಹುಣ್ಣುಗಳನ್ನು ಕಡಿಮೆ ಮಾಡುತ್ತವೆ.
ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.