ಚರ್ಮದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಮುಲ್ತಾನಿ ಮಿಟ್ಟಿ

Yashaswini V
Oct 30,2023

ಮುಲ್ತಾನಿ ಮಿಟ್ಟಿ

ನಮ್ಮ ಪೂರ್ವಜರ ಕಾಲದಿಂದಲೂ ಮುಲ್ತಾನಿ ಮಿಟ್ಟಿಯನ್ನು ಅತ್ಯುತ್ತಮ ಸೌಂದರ್ಯವರ್ಧಕವಾಗಿ ಬಲಳಸಲಾಗುತ್ತಿದೆ.

ಚರ್ಮದ ಆರೋಗ್ಯ

ಮುಲ್ತಾನಿ ಮಿಟ್ಟಿಯನ್ನು ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ ಸೌಂದರ್ಯವರ್ಧಕ ಎಂದು ಬಣ್ಣಿಸಲಾಗುತ್ತದೆ.

ಲಭ್ಯತೆ

ಬಹಳ ಸುಲಭವಾಗಿ ಲಭ್ಯವಿರುವ ಮುಲ್ತಾನಿ ಮಿಟ್ಟಿ ಬಜೆಟ್ ಸ್ನೇಹಿಯೂ ಹೌದು. ಹಾಗಾಗಿ, ಇದನ್ನು ಪ್ರತಿಯೊಬ್ಬರೂ ಸುಲಭವಾಗಿ ಖರೀದಿಸಬಹುದು.

ಮುಲ್ತಾನಿ ಮಿಟ್ಟಿ ಪ್ರಯೋಜನ

ಆಯುರ್ವೇದದ ಪ್ರಕಾರ, ಮುಲ್ತಾನಿ ಮಿಟ್ಟಿಯನ್ನು ಬಳಸುವುದರಿಂದ ಚರ್ಮಕ್ಕೆ ಸಿಗುವ ಐದು ಅತ್ಯದ್ಭುತ ಪ್ರಯೋಜನಗಳ ಬಗ್ಗೆ ನೋಡುವುದಾದರೆ...

ಕಲೆ ನಿವಾರಣೆ

ಮುಲ್ತಾನಿ ಮಿಟ್ಟಿಯನ್ನು ಬಳಸುವುದರಿಂದ ಮುಖದ ಮೇಲೆ ಮೂಡಿರುವ ಕಲೆಗಳನ್ನು ನಿವಾರಿಸಬಹುದು.

ಸುಕ್ಕು

ವಯಸ್ಸಾದಂತೆ ಮುಖದ ಮೇಲೆ ಸುಕ್ಕು ಮೂಡುವುದು ಸರ್ವೇ ಸಾಮಾನ್ಯ. ಆದರೆ, ಮುಲ್ತಾನಿ ಮಿಟ್ಟಿ ಪ್ಯಾಕ್ ಬಳಕೆಯಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.

ಮೊಡವೆ

ಬಹುತೇಕ ಜನರನ್ನು ಕಾಡುವ ದೊಡ್ಡ ಸಮಸ್ಯೆ ಮೊಡವೆ. ಆದರೆ, ಮುಲ್ತಾನಿ ಮಿಟ್ಟಿ ಜೊತೆಗೆ ಬೇವಿನ ಪೇಸ್ಟ್ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕಾಂತಿಯುತ ತ್ವಚೆ

ಮುಲ್ತಾನಿ ಮಿಟ್ಟಿಯನ್ನು ಮೊಸರು ಮತ್ತು ನಿಂಬೆ ರಶದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಬಹುದು.

ದೇಹಕ್ಕೆ ತಂಪು

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮುಲ್ತಾನಿ ಮಿಟ್ಟಿ ಪೇಸ್ಟ್ ತಯಾರಿಸಿ ದೇಹಕ್ಕೆ ಹಚ್ಚುವುದರಿಂದ ಇದು ದೇಹಕ್ಕೆ ತಂಪು ಮಾತ್ರವಲ್ಲದೆ, ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story