ಮೊಳಕೆ ಕಾಳು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಮೊಳಕೆಕಾಳಿನಲ್ಲಿ ಹಲವು ರೋಗನಿರೋಧಕ ಶಕ್ತಿಗಳಿದ್ದು, ಆರೋಗ್ಯಕ್ಕೆ ಸಹಕಾರಿಯಾಗುವ ಅಂಶಗಳಿವೆ.
ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳು ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ರಕ್ತ ಪರಿಚಲನೆಗೆ ಮೊಳಕೆ ಕಾಳಿನ ಸೇವನೆ ಉತ್ತಮ. ಇದರಲ್ಲಿ ಕಬ್ಬಿಣ ಮತ್ತು ಮೆಗ್ನಿಶಿಯಮ್ ಹೇರಳವಾಗಿದ್ದು, ಕೆಂಪು ರಕ್ತ ಕಣಗಳಿಗೆ ಸಹಕಾರಿ.
ತೂಕ ಇಳಿಸಲು ಡಯಟ್ ಮಾಡುವವರ ಆಹಾರದಲ್ಲಿ ಮೊಳಕೆ ಕಾಳು ಇರಲೇ ಬೇಕು.
ಮೊಳಕೆ ಕಾಳಿನಲ್ಲಿ ಫೈಬರ್ ಅಂಶ ಸಾಕಷ್ಟಿದ್ದು, ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
ಮೊಳಕೆ ಕಾಳಿನಲ್ಲಿ ವಿಟಮಿನ್ ‘ಸಿ’ ಅಂಶ ಸಾಕಷ್ಟಿರುವುದರಿಂದ ರೋಗ ನಿರೋಧಕ ಶಕ್ತಿಯಿದೆ.
ಮೊಳಕೆ ಕಾಳಿನಲ್ಲಿ 10 ಮೊಟ್ಟೆಯ ಶಕ್ತಿ ಇರುತ್ತದೆ ಎಂದು ಸಹ ಹೇಳಲಾಗುವುದು