ಕಾಳು ಮೆಣಸು ಕೇವಲ ಮಸಾಲೆಯಲ್ಲ, ಇದು ಹಲವಾರು ಆರೋಗ್ಯ ಗುಣಗಳಿಂದ ಸಮೃದ್ಧವಾಗಿದೆ.
ಕಾಳುಮೆಣಸು ಸೇವನೆಯು ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ.
ಕಾಳುಮೆಣಸಿನಲ್ಲಿ ಇರುವ ಪೈಪರಿನ್ ಅಂಶವು ಉರಿಯೂತ ಶಮನಕಾರಿ ಅಂಶವಾಗಿದೆ.
ಕಾಳು ಮೆಣಸಿಗೆ ಚಕ್ಕೆ ಸೇರಿಸಿ ಪುಡಿಮಾಡಿ ಹಾಲಿಗೆ ಹಾಕಿ ಕುದಿಸಿ ಬೆಳಗ್ಗೆ ಹಾಗೂ ರಾತ್ರಿ ಸೇವಿಸಬೇಕು. ಇದರಿಂದ ಶ್ವಾಸಕೋಶದ ಸಮಸ್ಯೆ ಅಂದರೆ ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ.
ಕಾಳು ಮೆಣಸಿನ ಜೊತೆ ಕಲ್ಲುಪ್ಪು ಸೇರಿಸಿ ಜಗಿದು ಸೇವಿಸಬೇಕು. ಇದರಿಂದ ಕೆಮ್ಮು ನಿವಾರಣೆಯಾಗುವುದಲ್ಲದೆ, ಗಂಟಲು ನೋವು ಸಹ ನಿವಾರಣೆಯಾಗುತ್ತದೆ.
ಮಕ್ಕಳಿಗೆ ಕಾಳು ಮೆಣಸಿನ ಪುಡಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಲು ಕೊಡಿ. ಇದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.
ಕಾಳು ಮೆಣಸಿಗೆ ಅರ್ಧ ಚಮಚ ಜೇನುತುಪ್ಪ, ತುಳಸಿ, ೧ ಚಮಚ ದೊಡ್ಡಪತ್ರೆಯ ರಸವನ್ನು ಸೇರಿಸಿ ಸೇವಿಸಿದರೆ ಸೈನಸೈಟಿಸ್ ನಿವಾರಣೆಯಾಗುತ್ತದೆ.
ಕಾಳು ಮೆಣಸಿಗೆ ಸ್ವಲ್ಪ ಲವಂಗ ಸೇರಿಸಿ ಜಜ್ಜಿ ಉಂಡೆ ಮಾಡಿ ಹಲ್ಲು ನೋವಿರುವ ಜಾಗಕ್ಕೆ ಇಟ್ಟರೆ ಹಲ್ಲು ನೋವು ನಿವಾರಣೆಯಾಗುತ್ತದೆ.