ಚಳಿಗಾಲದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚು.
ವಾತಾವರಣದಲ್ಲಾಗುವ ಬದಲಾವಣೆಯು ಹೃದಯದ ಮೇಲೂ ಪರಿಣಾಮ ಬೀರುತ್ತದೆ.
ಚಳಿಗಾಲದಲ್ಲಿ ಶೀತ ತಾಪಮಾನ ಹೆಚ್ಚಿರುವ ಕಾರಣ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ.
ಒಬೆಸಿಟಿ, ಡಯಾಬಿಟಿಸ್ ಹಾಗೂ ಬಿಪಿ ಹೊಂದಿರುವರು ಚಳಿಗಾಲದಲ್ಲಿ ತಮ್ಮ ಹೃದಯದ ಆರೈಕೆಗೆ ಹೆಚ್ಚು ಆದ್ಯತೆ ನೀಡಬೇಕು.
ಶೀತ ವಾತಾವರಣ ಹೃದಯದ ಮೇಲೆ ಹೆಚ್ಚು ಒತ್ತಡವನ್ನುಂಟು ಮಾಡಲಿದ್ದು, ಹೃದಯ ಕವಾಟಗಳಲ್ಲಿ ರಕ್ತಸಂಚಲನ ಕಷ್ಟಕರವಾಗುತ್ತದೆ.
ಚಳಿಗಾಲದಲ್ಲಿ ಅನೇಕರಿಗೆ ಉಸಿರಾಟದ ಸಮಸ್ಯೆ ಕಾಡಲಿದ್ದು, ಇದು ಹೃದಯದ ಮೇಲೆ ಹೆಚ್ಚು ಒತ್ತಡ ಬೀಳಲು ಕಾರಣವಾಗಲಿದೆ.
ಚಳಿಗಾಲದಲ್ಲಿ ಬಹುತೇಕ ಜನರು ದೈಹಿಕ ಚಟುವಟಿಕೆಯಿಂದ ದೂರ ಉಳಿಯುತ್ತಾರೆ. ಇದರಿಂದ ಹೃದಯಾಘಾತವುಂಟಾಗಲಿದೆ.
ಚಳಿಗಾಲದಲ್ಲಿ ಜಂಕ್ಫುಡ್ ಸೇವೆನೆ ಹೃದಯದ ಆರೋಗ್ಯ ಹಾಳಾಗಲಿದ್ದು, ಹೃದಯಾಘಾತಕ್ಕೆ ಕಾರಣವಾಗುತ್ತದೆ.