ನಿಯಮಿತವಾಗಿ ಕಬ್ಬಿನ ಹಾಲು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ವಿಟಮಿನ್, ಸತು, ರಂಜಕ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಸಮೃದ್ಧವಾಗಿವೆ.
ಕಬ್ಬಿನ ಹಾಲಿನಲ್ಲಿ ಕರಗುವ ನಾರಿನಾಂಶ ಅಗಾಧ ಪ್ರಮಾಣದಲ್ಲಿ ಕಂಡು ಬರುತ್ತದೆ.
ಈ ನಾರಿನಾಂಶವು ಕರುಳಿನ ಒಳಗೆ ಆಹಾರದ ಚಲನೆಯನ್ನು ಸುಲಭವಾಗಿಸಲು ಸಹಾಯ ಮಾಡುತ್ತದೆ.
ಕಬ್ಬಿನ ಹಾಲು ಸೇವನೆಯು ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಕಬ್ಬಿನ ಹಾಲು ಸೇವನೆಯಿಂದ ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರದಿಂದ ಮುಕ್ತಿ ಸಿಗುತ್ತದೆ.
ಕಬ್ಬಿನ ಹಾಲು ಅಥವಾ ಜ್ಯೂಸ್ ಕುಡಿಯುವುದರಿಂದ ಮೂತ್ರದ ಸಮಸ್ಯೆ ನಿವಾರಣೆಯಾಗುತ್ತದೆ.
ಆಯುರ್ವೇದದ ಪ್ರಕಾರ ಕಬ್ಬಿನ ಹಾಲು ಕಾಮಾಲೆಗೆ ಉತ್ತಮ ಪರಿಹಾರವೆಂದು ಹೇಳಲಾಗಿದೆ.