ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಕಿಡ್ನಿ ವೈಫಲ್ಯ ಅನುಭವಿಸುತ್ತಿದ್ದಾರೆ.
ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಮೂತ್ರಪಿಂಡದ ಸಮಸ್ಯೆಗಳು ಉಂಟಾಗಬಹುದು.
ನಿಮ್ಮ ಕಿಡ್ನಿ ಚೆನ್ನಾಗಿ ಕಾರ್ಯ ನಿರ್ವಹಿಸಬೇಕಾದರೆ ಈ ಸರಳ ಆರೋಗ್ಯ ಸೂತ್ರಗಳನ್ನು ಪಾಲಿಸಬೇಕು.
ಕಿಡ್ನಿ ಚೆನ್ನಾಗಿ ಕೆಲಸ ಮಾಡಬೇಕಾದರೆ ನೀವು ಆಗಾಗ ನೀರು ಕುಡಿಯುತ್ತೀರಬೇಕು.
ಊಟಕ್ಕೆ ರುಚಿ ಕೊಡುವ ಉಪ್ಪಿನ ಸೇವನೆಯ ಪ್ರಮಾಣದ ಬಗ್ಗೆ ನೀವು ಎಚ್ಚರ ವಹಿಸಬೇಕು.
ಆಲ್ಕೋಹಾಲ್ ಅಧಿಕ ಸೇವನೆಯಿಂದ ಸಂಭವಿಸುವ ಹೈಪರ್ಟೆನ್ಷನ್ನಿಂದ ಕಿಡ್ನಿ ವೈಫಲ್ಯದ ಸಾಧ್ಯತೆಗಳು ಅಧಿಕವಾಗುತ್ತವೆ.
ಪೇನ್ ಕಿಲ್ಲರ್ ಅಧಿಕ ಸೇವನೆಯಿಂದಲೂ ಕಿಡ್ನಿ ವೈಫಲ್ಯ ಉಂಟಾಗುತ್ತದೆ.
ಧೂಮಪಾನದಿಂದ ಸಂಭವಿಸುವ ಅನೇಕ ರೀತಿಯ ಅನಾರೋಗ್ಯ ಸಮಸ್ಯೆಯಲ್ಲಿ ಕಿಡ್ನಿ ಕ್ಯಾನ್ಸರ್ನ ಸಾಧ್ಯತೆಯು ಒಂದಾಗಿದೆ.