ಚಳಿಗಾಲದಲ್ಲಿ ಒಣ ದ್ರಾಕ್ಷಿ ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ರಾತ್ರಿ ನೀರಿನಲ್ಲಿ ಒಣದ್ರಾಕ್ಷಿ ನೆನೆಸಿಟ್ಟು ಬೆಳಗ್ಗೆ ಎದ್ದಕೂಡಲೇ ನೀರು ಸಹಿತ ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
ಪ್ರತಿದಿನ ಒಣದ್ರಾಕ್ಷಿ ಸೇವನೆಯಿಂದ ಕೊಲೆಸ್ಟ್ರಾಲ್ ಸಮಸ್ಯೆ ದೂರವಾಗುತ್ತದೆ.
ನಿಯಮಿತವಾಗಿ ಒಣದ್ರಾಕ್ಷಿ ಸೇವನೆಯಿಂದ ರಕ್ತ ಶುದ್ಧವಾಗುತ್ತದೆ.
ಒಣ ದ್ರಾಕ್ಷಿ ಸೇವನೆಯಿಂದ ತುರಿಕೆ, ಕಜ್ಜಿ ಮೊದಲಾದ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ
ಒಣದ್ರಾಕ್ಷಿ ಕೂದಲು ಉದುರುವಿಕೆ ಸಮಸ್ಯೆಯನ್ನು ದೂರ ಮಾಡುತ್ತದೆ.
ಒಣದ್ರಾಕ್ಷಿ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತವೆ.
ಒಣದ್ರಾಕ್ಷಿ ರಕ್ತ ಹೀನತೆಯನ್ನು ದೂರ ಮಾಡಿ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ.