ಪ್ರತಿದಿನ ನಾವು ಸೇವಿಸುವ ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಟೀ ಕುಡಿಯಬಾರದು.
ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ಚಹಾ ಸೇವಿಸಿದರೆ ಅದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ.
ಬೆಳ್ಳಂಬೆಳಗ್ಗೆ ಚಹಾ ಕುಡಿಯುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಏಕೆಂದರೆ ನಿಮಗೆ ತಲೆ ನೋವು ಶುರುವಾಗಬಹುದು.
ನೀವು ಯಾವುದೇ ಸಮಯದಲ್ಲಿ ಟೀ ಕುಡಿದರೂ ಗ್ಯಾಸ್ಟ್ರಿಕ್ ಆಗುತ್ತದೆ, ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಈ ರೀತಿಯ ಗ್ಯಾಸ್ಟ್ರಿಕ್‌ನಿಂದ ನೀವು ಯಾವುದೇ ಆಹಾರ ಸೇವಿಸಿದರೂ ಅಷ್ಟು ಬೇಗನೆ ಅದು ಜೀರ್ಣವಾಗುವುದಿಲ್ಲ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಬಹುತೇಕ ಜನರಿಗೆ ಮಲಬದ್ಧತೆ ಸಮಸ್ಯೆ ಕಂಡುಬರುತ್ತದೆ.
ಚಹಾ ನಿಮ್ಮ ಹೊಟ್ಟೆಯಲ್ಲಿ ಆಮ್ಲಿಯತೆಯ ಸಮತೋಲನವನ್ನು ತಪ್ಪುವಂತೆ ಮಾಡಬಹುದು.
ಖಾಲಿ ಹೊಟ್ಟೆಯಲ್ಲಿ ಟೀ ಕುಡಿದ್ರೆ ಆಮ್ಲಿಯತೆಯಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.