ಹಸಿರು ಟೊಮೇಟೊದಲ್ಲಿ ಕಂಡುಬರುವ ಪೋಷಕಾಂಶಗಳು ಅನೇಕ ರೋಗಗಳಿಂದ ನಮಗೆ ರಕ್ಷಣೆ ನೀಡುತ್ತವೆ.
ಹಸಿರು ಟೊಮೇಟೊಲದಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ ಸೇರಿದಂತೆ ಹಲವಾರು ಪೋಷಕಾಂಶಗಳಿವೆ.
ಕಣ್ಣಿನ ದೃಷ್ಟಿಯಿಂದ ಹಿಡಿದು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವವರೆಗೂ ಹಸಿರು ಟೊಮೇಟೊ ಪ್ರಯೋಜನಕಾರಿ.
ಹಸಿರು ಟೊಮೇಟೊ ವಿಟಮಿನ್ 'C'ಯ ಉತ್ತಮ ಮೂಲವಾಗಿದ್ದು, ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದರ ಜೊತೆಗೆ ಸೋಂಕುಗಳ ವಿರುದ್ಧ ಹೋರಾಡಲು ಸಹಕಾರಿ.
ಹಸಿರು ಟೊಮೇಟೊದಲ್ಲಿ ಉತ್ತಮ ಪ್ರಮಾಣದ ಫೋಲಿಕ್ ಆಮ್ಲವಿದ್ದು, ಇದು ಗರ್ಭಿಣಿಯರಿಗೆ ತುಂಬಾ ಮುಖ್ಯ.
ಹಸಿರು ಟೊಮೇಟೊದಲ್ಲಿರುವ ಲೈಕೋಪೀನ್, ಹಲವಾರು ರೋಗಗಳಿಗೆ ರಾಮಬಾಣವಾಗಿದೆ.
ಹಸಿರು ಟೊಮೇಟೊಗಳಲ್ಲಿ ಬಹಳಷ್ಟು ವಿಟಮಿನ್ಗಳಿದ್ದು, ಇವು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.
ಹಸಿರು ಟೊಮೇಟೊ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.