ಇಂದು ಅನೇಕರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಕಳಪೆ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯಿಂದ ಮಲಬದ್ಧತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ಮಲಬದ್ಧತೆ ಅನೇಕ ರೋಗಗಳ ಲಕ್ಷಣವಲ್ಲದೆ ಜೀರ್ಣಕ್ರಿಯೆಯಲ್ಲಿನ ಅಸಮತೋಲನದ ಸಂಕೇತ.
ತುಪ್ಪದಂತಹ ಉತ್ತಮ ಕೊಬ್ಬನ್ನು ಸೇವಿಸುವುದರಿಂದ ನೀವು ಮಲಬದ್ಧತೆಯಿಂದ ಪರಿಹಾರ ಪಡೆಯುತ್ತೀರಿ.
ಮಲಗುವ ಮುನ್ನ ಪ್ರತಿದಿನ 1 ಲೋಟ ಹಾಲಿಗೆ ಅರ್ಧ ಚಮಚ ತುಪ್ಪ ಸೇರಿಸಿ ಕುಡಿದ್ರೆ ಜೀರ್ಣಕ್ರಿಯೆ ಸಹಕಾರಿ.
ಮಲಬದ್ಧತೆ ಮತ್ತು ಪೈಲ್ಸ್ನಂತಹ ಗಂಭೀರ ಸಮಸ್ಯೆಗಳನ್ನು ತಪ್ಪಿಸಲು ನೀವು ಸಾಕಷ್ಟು ನೀರು ಕುಡಿಯಬೇಕು.
ಪ್ರತಿದಿನ ವ್ಯಾಯಾಮ ಮಾಡುವುದು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಉತ್ತಮ ಮಾರ್ಗ.
ರಾತ್ರಿ ಮಲಗುವ ಮುನ್ನ 5-6 ಒಣದ್ರಾಕ್ಷಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದ್ರೆ ಮಲವಿಸರ್ಜಿಸಲು ಸುಲಭವಾಗುತ್ತದೆ.