ಮೂಲಂಗಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಮೂಲಂಗಿ ಒಂದು ಆರೋಗ್ಯದಾಯಕ ತರಕಾರಿಯಾಗಿದ್ದು, ಹಲವಾರು ರೋಗಗಳಿಗೆ ಉತ್ತಮ ಔಷಧಿಯಾಗಿದೆ.
ಮೂಲಂಗಿ ತರಕಾರಿಯನ್ನು ಸೇವಿಸಿದರೆ ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ ಜೊತೆಗೆ ಇನ್ನಿತರ ಆರೋಗ್ಯ ಲಾಭ ಪಡೆಯಬಹುದು.
ಮೂಲಂಗಿ ಗಡ್ಡೆಯ ರಸವನ್ನು ಮಜ್ಜಿಗೆಗೆ ಸೇರಿಸಿ ಸೇವಿಸಿದರೆ ಅಜೀರ್ಣದಿಂದ ಉಂಟಾದ ಅತಿಸಾರ ಗುಣವಾಗುತ್ತದೆ.
ಮೂಲಂಗಿ ಸೊಪ್ಪನ್ನು ತರಕಾರಿ ರೂಪದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಿತಕರವಾಗಿರುತ್ತದೆ.
ಬಲಿತ ಮೂಲಂಗಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ಎಳೆಯ ಮೂಲಂಗಿಯನ್ನಷ್ಟೇ ಸೇವಿಸಬೇಕು.
ಮೂಲಂಗಿ ಸೊಪ್ಪಿನ ರಸಕ್ಕೆ 2-3 ಚಮಚ ಜೇನುತುಪ್ಪ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕಾಮಾಲೆ ರೋಗ ಗುಣವಾಗುತ್ತದೆ.
ಮೂಲಂಗಿ ಸೊಪ್ಪಿನ ರಸಕ್ಕೆ ಕೊಂಚ ಬಿಳಿ ಮೆಣಸಿನಪುಡಿ ಹಾಗೂ ಜೇನು ಸೇರಿಸಿ ಸೇವಿಸಿದರೆ ಮೂತ್ರಕೋಶದಲ್ಲಿನ ಕಲ್ಲುಗಳು ಕರಗುತ್ತವೆ.