ಹೀರೆಕಾಯಿ ಪೌಷ್ಟಿಕ ತರಕಾರಿ ಮಾತ್ರವಲ್ಲದೇ ಹಲವಾರು ಔಷಧ ಗುಣಗಳನ್ನು ಹೊಂದಿದೆ.
ದೇಹದಲ್ಲಿ ಉರಿ ಇದ್ದರೆ ಹೀರೆಕಾಯಿ ತಿರುಳನ್ನು ತುಪ್ಪದಲ್ಲಿ ಬೇಯಿಸಿ ಮೊಸರಿನ ಜೊತೆಗೆ ಸೇವಿಸಿದರೆ ದೇಹ ತಂಪಾಗುತ್ತದೆ.
ಪಿತ್ತದಿಂದ ಬರುವ ಜ್ವರಕ್ಕೆ ಹೀರೆಕಾಯಿ ಎಲೆಯ ಕಷಾಯ ಮಾಡಿ ಅದಕ್ಕೆ ಸಕ್ಕರೆ ಸೇರಿಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
ಹೀರೆಕಾಯಿ ಸೇವನೆಯು ಸುಲಭವಾಗಿ ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ.
ಮಲಬದ್ಧತೆ ಸಮಸ್ಯೆಗೆ ಪರಿಹಾರ ಬೇಕಾದರೆ ನಿಯಮಿತವಾಗಿ ಹೀರೆಕಾಯಿ ಸೇವಿಸಬೇಕು.
ಹೀರೆಕಾಯಿ ಸೇವನೆಯು ನಿಮ್ಮ ಲಿವರ್ ಆರೋಗ್ಯವನ್ನು ಕಾಪಾಡುತ್ತದೆ.
ನಿಯಮಿತವಾಗಿ ಹೀರೆಕಾಯಿ ಸೇವನೆಯಿಂದ ನಿಮ್ಮ ಕಣ್ಣಿನ ದೃಷ್ಟಿ ಮತ್ತಷ್ಟು ಸುಧಾರಿಸುತ್ತದೆ.
ಹೀರೆಕಾಯಿ ಸೇವನೆಯು ಮಧುಮೇಹ ಮತ್ತು ಅಸ್ತಮಾದಿಂದ ಮುಕ್ತಿ ಹೊಂದಲು ಸಹಕಾರಿ.