ಪುರುಷ & ಮಹಿಳೆ ಇಬ್ಬರಲ್ಲಿಯೂ ಶ್ವಾಸಕೋಶ & ಶ್ವಾಸನಾಳದ ಕ್ಯಾನ್ಸರ್‌ನ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಈ ಕ್ಯಾನರ್‌ಗೆ ಒಳಗಾಗುವ ಶೇ.80ರಷ್ಟು ಮಂದಿ ಧೂಮಪಾನ ಮಾಡುತ್ತಾರೆ ಎಂಬುದರ ಬಗ್ಗೆ ಅಧ್ಯಯನಗಳು ತಿಳಿಸಿವೆ.
ಸಿಗರೇಟ್, ಸಿಗಾರ್ ಅಥವಾ ಪೈಪ್‌ಗಳನ್ನು ಒಳಗೊಂಡಂತೆ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಬಳಕೆ ಅಪಾಯಕಾರಿ.
ಶ್ವಾಸಕೋಶದ ಕ್ಯಾನ್ಸರ್ ಸಾವುಗಳಲ್ಲಿ 80% ಧೂಮಪಾನಕ್ಕೆ ಸಂಬಂಧಿಸಿದೆ ಎಂದು ದೃಢವಾಗಿದೆ.
ವಾಯು ಮಾಲಿನ್ಯ, ರೇಡಾನ್, ಯುರೇನಿಯಂ, ಡೀಸೆಲ್ ಎಕ್ಸಾಸ್ಟ್, ಸಿಲಿಕಾ, ಕಲ್ಲಿದ್ದಲು ಉತ್ಪನ್ನ ಸೇರಿದಂತೆ ಹಾನಿಕಾರಕ ಪದಾರ್ಥಗಳಿಗೆ ಒಡ್ಡಿಕೊಳ್ಳುವುದು ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವಾಗಬಹುದು.
ಈ ಕ್ಯಾನ್ಸರ್ ಬಂದಾಗ ತಲೆಯಲ್ಲಿನ ಕೂದಲು ವೇಗವಾಗಿ ಉದುರಿ ಹೋಗುತ್ತವೆ. ಇದು ಈ ರೋಗದ ಪ್ರಮುಖ ಸೂಚನೆಯಾಗಿದೆ.
ಸುಟ್ಟ ಪ್ಲಾಸ್ಟಿಕ್ ಮತ್ತು ಹೊಗೆಯಿಂದ ಕೂಡಿದ ಗಾಳಿಯನ್ನು ಕುಡಿಯುವುದು ಕೂಡ ನಮ್ಮ ಆರೋಗ್ಯಕ್ಕೆ ಅಪಾಯ.
ದೇಹದಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಉತ್ತಮ.