ತ್ವಚೆಯ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ಹಾಲನ್ನು ಬಳಸಬಹುದು.
ಮುಖದ ಮೇಲಿನ ಕೊಳೆಯನ್ನು ಹೋಗಲಾಡಿಸಲು ಹಸಿ ಹಾಲನ್ನು ಬಳಸಬಹುದು.
ಹಸಿ ಹಾಲನ್ನು ಮುಖದ ಮೇಲೆ ಟೋನರ್ ರೀತಿಯಲ್ಲಿ ಬಳಸಬಹುದು.
೨ ಚಮಚ ಹಸಿ ಹಾಲು ತೆಗೆದುಕೊಂಡು ಅದಕ್ಕೆ ೫ ರಿಂದ ೬ ಹನಿ ರೋಜ್ ವಾಟರ್ ಹಾಕಬೇಕು.ಈ ಮಿಶ್ರಣವನ್ನು ಮುಖಕ್ಕೆ ಹಚ್ಚಬೇಕು.
ಇದು ಆಯಿಲಿ ಸ್ಕಿನ್ ಅನ್ನು ನಾರ್ಮಲ್ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.
ಕಾಫಿ ಮತ್ತು ಒಟ್ಸ್ ಪೌಡರ್ ಅನ್ನು ಹಾಲಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಬೇಕು
ಹಸಿ ಹಾಲು, ಕಡಲೆ ಹಿಟ್ಟು, ಅರಶಿನ ಮತ್ತು ಜೇನು ತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ ೧೫ ನಿಮಿಷಗಳವರೆಗೆ ಬಿಡಬೇಕು.
ಹಸಿ ಹಾಲನ್ನು ಈ ರೀತಿ ಮುಖಕ್ಕೆ ಹಚ್ಚಿದರೆ ತ್ವಚೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುವುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.