ಪ್ರತಿಯೊಬ್ಬರಿಗೂ ತಮ್ಮ ಕೂದಲಿನ ಅಂದತ್ವವನ್ನು ಹೆಚ್ಚಿಸಿಕೊಳ್ಳಬೇಕೆಂಬ ಆಸೆಯಾಗಿರುತ್ತೆ ದಿನನಿತ್ಯ ಉತ್ತಮವಾದ ಆಹಾರವನ್ನು ಸೇವಿಸಿ, ಆರೋಗ್ಯಕರ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.
ಅವಕಾಡೊಗಳಲ್ಲಿ ವಿಟಮಿನ್ ಇ ಅಂಶಗಳು ಹೇರಳವಾಗಿದ್ದೂ,ದೇಹದಲ್ಲಿ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ.ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.
ಪಾಲಾಕ್ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಕೂದಲಿಗೆ ಹೆಚ್ಚಿನ ಕಬ್ಬಿಣಾಂಶಗಳು ದೊರೆತು ಕೂದಲನ್ನು ಆರೋಗ್ಯವಾಗಿಡುತ್ತದೆ.
ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶಗಳು ಹೆಚ್ಚಿದ್ದು,ಕೂದಲು ಒಡೆಯುವುಕೆಯನ್ನು ತಡೆಯುವುದಲ್ಲದೇ ಕೂದಲು ಉದುರುವುದನ್ನು ಕಡೆಮೆ ಮಾಡುತ್ತದೆ.
ಬೀನ್ಸ್‌ನಲ್ಲಿ ಹೆಚ್ಚಿನ ಪ್ರೊಟೀನ್ ಅಂಶಗಳಿದ್ದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಬಹುದು.
ಆಹಾರದಲ್ಲಿ ಕ್ಯಾರೆಟ್ ಬಳಸುವದರಿಂದ ನಿಮ್ಮ ಕೂದಲು ವೇಗವಾಗಿ ಬೆಳೆಯವುಂತೆ ಮಾಡುತ್ತದೆ.
ಕೂದಲಿನ ಬೆಳವಣಿಗೆಗೆ ಸೇವಿಸಬೇಕಾದ ಹಣ್ಣುಗಳಲ್ಲಿ ಕಿತ್ತಳೆಯು ಒಂದಾಗಿದ್ದೂ,ಇದು ನೆತ್ತಿಯ ಮೇಲಿನ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ.
ಶೇಂಗಾ ಬೀಜವನ್ನು ಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಕುಂಬಳಕಾಯಿ ಬೀಜವನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಬಹುದು.