ಚಿಕೂನ್‌ಗುನ್ಯಾಗೆ ಮನೆಮದ್ದು

Jul 09,2024

ಚಿಕೂನ್‌ಗುನ್ಯಾ

ಮಳೆಗಾಲದಲ್ಲಿ ಚಿಕೂನ್‌ಗುನ್ಯಾ, ಡೆಂಗ್ಯೂ ಸಮಸ್ಯೆ ಹೆಚ್ಚಾಗುತ್ತಿದೆ. ವೈದ್ಯರನ್ನು ಸಂಪರ್ಕಿಸಿ ಔಷಧಿ ಪಡೆಯುವುದರ ಜೊತೆಗೆ ಕೆಲವು ಮನೆಮದ್ದುಗಳನ್ನು ಬಳಸುವುದರಿಂದ ಈ ಸಮಸ್ಯೆಯಿಂದ ಬೇಗ ಪರಿಹಾರ ಪಡೆಯಬಹುದು. ಅಂತಹ ಮನೆಮದ್ದುಗಳೆಂದರೆ..

ಹಸುವಿನ ಹಾಲು

ಪ್ಯಾಕೆಟ್ ಹಾಲಿನ ಬದಲಿಗೆ ಫ್ರೆಶ್ ಹಸುವಿನ ಹಾಲಿನಿಂದ ತಯಾರಿಸಿದ ಮೊಸರು, ತುಪ್ಪವನ್ನು ಬಳಸುವುದರಿಂದ ಶೀಘ್ರದಲ್ಲೇ ಚಿಕೂನ್‌ಗುನ್ಯಾ ಜ್ವರದಿಂದ ಪರಿಹಾರ ಪಡೆಯಬಹುದು.

ಪರಂಗಿ ಎಲೆ

ಪರಂಗಿ ಎಲೆಗಳನ್ನು ತೊಳೆದು ಅದನ್ನು ರುಬ್ಬಿ ರಸ ಪಡೆದು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಚಿಕೂನ್‌ಗುನ್ಯಾ, ಡೆಂಗ್ಯೂ ಸಮಸ್ಯೆಯಿಂದವ್ ಕೆಲವೇ ದಿನಗಳಲ್ಲಿ ಗುಣಮುಖವಾಗಬಹುದು.

ಬೆಳ್ಳುಳ್ಳಿ

ಚಿಕೂನ್‌ಗುನ್ಯಾ ಸಂದರ್ಭದಲ್ಲಿ ಬೆಳ್ಳುಳ್ಳಿ ಲವಂಗವನ್ನು ಎಣ್ಣೆಯಲ್ಲಿ ಬಿಸಿ ಮಾಡಿ ಕೀಲುಗಳಿಗೆ ಮಸಾಜ್ ಮಾಡುವುದು ಹೆಚ್ಚು ಪ್ರಯೋಜನಕಾರಿ.

ದ್ರಾಕ್ಷಿ

ಬೀಜರಹಿತ ದ್ರಾಕ್ಷಿಯನ್ನು ಹಸುವಿನ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಚಿಕೂನ್‌ಗುನ್ಯಾ ವೈರಾಣುವನ್ನು ನಾಶಪಡಿಸಬಹುದು.

ಕ್ಯಾರೆಟ್

ಕ್ಯಾರೆಟ್ ಸೇವನೆಯಿಂದಲೂ ಚಿಕೂನ್‌ಗುನ್ಯಾ ಸಮಸ್ಯೆಯಿಂದ ಕೊಂಚ ಪರಿಹಾರ ಪಡೆಯಬಹುದು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story