ಕೆಲವರಿಗೆ ಆಹಾರ ತಿಂದ ಕೂಡಲೇ ಹೊಟ್ಟೆ ಉಬ್ಬುವುದು, ಹುಳಿ ತೇಗು ಬರುವುದು ಮುಂತಾದ ಸಮಸ್ಯೆ ಇರುತ್ತದೆ.
ಹಲವರಿಗೆ ಹುಳಿ ತೇಗಿನ ಜೊತೆಗೆ ಕೆಟ್ಟ ವಾಸನೆ, ಬಾಯಿಯಲ್ಲಿ ಹುಳಿ ನೀರು ಮತ್ತು ಎದೆಯಲ್ಲಿ ಉರಿ ಮುಂತಾದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
ಕರಿದ ಆಹಾರವನ್ನು ತಿನ್ನುವುದು, ಅತಿಯಾಗಿ ತಿನ್ನುವುದು,ಬೇಗ ಬೇಗನೆ ತಿನ್ನುವುದು, ಅಜೀರ್ಣ, ಆಸಿಡಿಟಿ, ಧೂಮಪಾನ ಮತ್ತು ಮದ್ಯಪಾನ ಈ ಕಾರಣಗಳಿಂದ ಹುಳಿ ತೇಗು ಬರುತ್ತದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸೋಂಪು ತುಂಬಾ ಪರಿಣಾಮಕಾರಿಯಾಗಿದೆ. ಇದು ಗ್ಯಾಸ್, ಹೊಟ್ಟೆ ಉಬ್ಬುವುದು ಮತ್ತು ಹುಳಿ ತೇಗಿನಿಂದ ಪರಿಹಾರವನ್ನು ನೀಡುತ್ತದೆ.
ಹುಳಿ ತೇಗು ಸಮಸ್ಯೆಯಲ್ಲಿ ಶುಂಠಿಯ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಇದು ಗ್ಯಾಸ್ ಮತ್ತು ಹುಳಿ ತೇಗಿನಿಂದ ಪರಿಹಾರವನ್ನು ನೀಡುತ್ತದೆ.
ಹುಳಿ ತೇಗಿನ ಸಮಸ್ಯೆಯನ್ನು ಹೋಗಲಾಡಿಸಲು, ಜೀರಿಗೆ ನೀರನ್ನು ಸೇವಿಸಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಗ್ಯಾಸ್,ಆಸಿಡಿಟಿ ಮತ್ತು ಹುಳಿ ತೇಗಿನ ಸಮಸ್ಯೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಹೊಟ್ಟೆ ನೋವು, ಗ್ಯಾಸ್ ಮತ್ತು ಹುಳಿ ತೇಗಿನ ಸಮಸ್ಯೆಯಿಂದ ಪರಿಹಾರವನ್ನು ಒದಗಿಸುವಲ್ಲಿ ಇದು ಸಹಾಯಕವಾಗಿದೆ. ಇದಕ್ಕಾಗಿ ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಚಿಟಿಕೆ ಇಂಗು ಬೆರೆಸಿ ಕುಡಿಯಬಹುದು.
ಹುಳಿ ತೇಗಿನ ಸಮಸ್ಯೆಯನ್ನು ನಿವಾರಿಸಲು ಪುದೀನ ಎಲೆಗಳ ಸೇವನೆಯು ಪ್ರಯೋಜನಕಾರಿಯಾಗಿದೆ.ಇದು ಹುಳಿ ತೇಗು, ಎದೆಯುರಿ ಮತ್ತು ಗ್ಯಾಸ್ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.