ಹವಾಮಾನ ಬದಲಾಗುತ್ತಿದ್ದ ಹಾಗೆ ಗಂಟಲು ನೋವು, ಕೆಮ್ಮು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ.
ಗಂಟಲು ನೋವಿನಿಂದ ಮುಕ್ತಿ ಪಡೆಯಲು ಉಪ್ಪು ನೀರಿನಿಂದ ಗಾರ್ಗಲ್ ಮಾಡಬಹುದು. ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಚಮಚ ಉಪ್ಪು ಹಾಕಿ ಈ ನೀರಿನಲ್ಲಿ ಗಾರ್ಗಲ್ ಮಾಡಬಹುದು.
ಉಗುರು ಬಿಸಿಯಿರುವ ನೀರಿಗೆ ಸ್ವಲ್ಪ ಅರಶಿನ ಹಾಕಿ ಅದರಿಂದ ಗಾರ್ಗಲ್ ಮಾಡಿದರೂ ಗಂಟಲು ನೋವು ಕಡಿಮೆಯಾಗುತ್ತದೆ.
ಬಿಸಿ ನೀರಿನಲ್ಲಿ ಒಂದು ಚಮಚ ಓಮ ಕಾಳು ಹಾಕಿ ಅದು ತಣ್ಣಗಾದ ಬಳಿಕ ಈ ನೀರಿನಿಂದ ಗಾರ್ಗಲ್ ಮಾಡಿದರೂ ಗಂಟಲು ನೋವು ಕಡಿಮೆಯಾಗುತ್ತದೆ.
ತುಳಸಿ, ಚಕ್ಕೆ, ಕರಿ ಮೆಣಸು, ಶುಂಠಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ಗಂಟಲು ನೋವು ಕಡಿಮೆಯಾಗುತ್ತದೆ.
ಚಕ್ಕೆ ಚಹಾ, ಅರಶಿನ ಚಹಾ , ಶುಂಠಿ ಮತ್ತು ನಿಂಬೆ ರಸ ಚಹಾ, ತುಳಸಿ ಚಹಾ ಸೇವಿಸುವ ಮೂಲಕ ಗಂಟಲು ನೋವು ಕಡಿಮೆಯಾಗುವುದು.
ನಿತ್ಯ ಮಲಗುವ ಮುನ್ನ ಅರಶಿನ ಹಾಲು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಜೇನು ತುಪ್ಪಕ್ಕೆ ಚಕ್ಕೆ ಪುಡಿಯನ್ನು ಬೆರೆಸಿ ಸೇವಿಸಿದರೆ ಕೂಡಾ ಗಂಟಲು ನೋವು ಕಡಿಮೆಯಾಗುವುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.