ಹಿಮ್ಮಡಿ ನೋವಿನಿಂದ ಪರಿಹಾರಕ್ಕಾಗಿ ಮನೆಮದ್ದು
ತಪ್ಪಾದ ಪಾದರಕ್ಷೆ ಬಳಕೆ, ಮೂಳೆ ಬೆಳವಣಿಗೆ, ಗಾಯ ಸೇರಿದಂತೆ ಹಿಮ್ಮಡಿ ನೋವಿಗೆ ಹಲವು ಕಾರಣಗಳಿರಬಹುದು. ಆದರೆ, ಕೆಲವು ಮನೆ ಮದ್ದುಗಳ ಸಹಾಯದಿಂದ ಇದಕ್ಕೆ ಸುಲಭ ಪರಿಹಾರ ಪಡೆಯಬಹುದು.
ಹಿಮ್ಮಡಿ ಹೆಚ್ಚು ನೋಯುತ್ತಿದ್ದರೆ ಸ್ವಲ್ಪ ಎಣ್ಣೆ ಹಾಕಿ ಇದರಲ್ಲಿ ಅರಿಶಿನವನ್ನು ಉಪ್ಪು, ನಿಂಬೆ ಓಳು ಮತ್ತು ಈರುಳ್ಳಿಯನ್ನು ಬೆರೆಸಿ ಹುರಿಯಿರಿ. ಸ್ವಲ್ಪ ಉಗುರು ಬೆಚ್ಚಗಿರುವಾಗ ಇದನ್ನು ಹಿಮ್ಮಡಿಯ ಮೇಲೆ ಲೇಪಿಸಿ.
ಹಿಮ್ಮಡಿ ನೋವಿನಿಂದ ಪರಿಹಾರಕ್ಕಾಗಿ ನೋವಿನ ಎಣ್ಣೆಯನ್ನು ಬಿಸಿ ಮಾಡಿ ಅದನ್ನು ನೋವಿರುವ ಜಾಗದಲ್ಲಿ ಹಚ್ಚಿ ಮಸಾಜ್ ಮಾಡುವುದು ಕೂಡ ಪರಿಣಾಮಕಾರಿ ಆಗಿದೆ.
ಕಾಲ್ಬೆರಳುಗಳ ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡುವುದರಿಂದಲೂ ಹಿಮ್ಮಡಿ ನೋವಿನಿಂದ ಪರಿಹಾರ ಪಡೆಯಬಹುದು.
ನಿಮ್ಮ ಪಾದಗಳಲ್ಲಿ ಬಿಸಿ ಮತ್ತು ತಣ್ಣನೆಯ ನೀರಿನಲ್ಲಿ ಪರ್ಯಾಯವಾಗಿ 3 ಬಾರಿ ಇರಿಸಿ. ಐದು ನಿಮಿಷ ಬಿಸಿ ನೀರಿನಲ್ಲಿ, ಮೂರು ನಿಮಿಷ ತಣ್ಣೀರಿನಲ್ಲಿ ಇರಿಸಿ. ಹೆಚ್ಚು ಹೊತ್ತು ನಿಲ್ಲುವುದರಿಂದ ಬರುವ ಹಿಮ್ಮಡಿ ನೋವಿಗೆ ಇದು ಸುಲಭ ಪರಿಹಾರವಾಗಿದೆ.
ಒಂದು ಬಕೆಟ್ ನಲ್ಲಿ ಬಿಸಿ ನೀರಿಗೆ ಉಪ್ಪು ಬೆರೆಸಿ ಕೆಲಕಾಲ ಆ ನೀರಿನೊಳಗೆ ಕಾಲಿಟ್ಟು ಕೂರುವುದರಿಂದ ಹಿಮ್ಮಡಿ ನೋವಿನಿಂದ ಪರಿಹಾರ ದೊರೆಯುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.