ತುಂಬಾ ಸುಸ್ತಾಗ್ತಿದ್ಯಾ..! ಎನರ್ಜಿ ಡ್ರಿಂಕ್ಸ್ ಬೇಡ... ಈ ಚಮತ್ಕಾರಿ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ ಕುಡಿಯಿರಿ

Yashaswini V
Nov 11,2024

ಆಯಾಸ

ಆಯಾಸ ಎಂದರೆ ಕೇವಲ ದೈಹಿಕ ಆಯಾಸವಲ್ಲ, ಭಾವನಾತ್ಮಕ ಆಯಾಸವೂ ಕೂಡ ಒಂದು ರೀತಿಯ ಕಾಯಿಲೆಯೇ ಆಗಿದೆ.

ಡ್ರಿಂಕ್ಸ್

ಕೆಲವರು ಆಯಾಸವಾದೊಡನೆ ದೈಹಿಕವಾಗಿ ಶಕ್ತಿ ಹೊಂದಲು ಎನರ್ಜಿ ಡ್ರಿಂಕ್ಸ್ ಕುಡಿಯುತ್ತಾರೆ. ಆದ್ರೆ, ಇವು ತಕ್ಷಣಕ್ಕೆ ಪರಿಹಾರ ನೀಡಿದರೂ ಕೂಡ ಇದರಲ್ಲಿರುವ ಸಕ್ಕರೆ ಹಾಗೂ ರಾಸಾಯನಿಕಗಳು ದೀರ್ಘಾವಧಿಯಲ್ಲಿ ತೊಂದರೆ ಉಂಟು ಮಾಡಬಹುದು.

ಆಯಾಸಕ್ಕಾಗಿ ಪಾನೀಯ

ಆಯಾಸವಾದಾಗ ಎನರ್ಜಿ ಡ್ರಿಂಕ್ಸ್ ಬದಲಿಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಕೆಲವು ಪಾನೀಯಗಳ ಸೇವನೆ ಹೆಚ್ಚು ಲಾಭದಾಯಕವಾಗಿದೆ.

ಆಲೂಗಡ್ಡೆ ಜ್ಯೂಸ್

ತಾಜಾ ಆಲೂಗಡ್ಡೆಯನ್ನು ತುರಿದು ನೀರಿನಲ್ಲಿ ನೆನೆಸಿದಾಗ ಪೊಟ್ಯಾಸಿಯಂ ಸಮೃದ್ಧವಾಗಿರುವ ಪಾನೀಯ ರೆಡಿಯಾಗುತ್ತದೆ. ಇದರ ಸೇವನೆಯು ದೇಹಕ್ಕೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ.

ನಿಂಬೆ ರಸ

ನಿಂಬೆ ರಸಕ್ಕೆ ಚಿಟಿಕೆ ಉಪ್ಪು ಬೆರೆಸಿ ಸ್ವಲ್ಪವೇ ಸ್ವಲ್ಪ ಸಕ್ಕರೆ ಹಾಕಿ ಕುಡಿದರೆ ಆಯಾಸ ಕೂಡಲೇ ನಿವಾರಣೆಯಾಗಿ ಉಲ್ಲಾಸ ತುಂಬುತ್ತದೆ.

ಕಿತ್ತಳೆ ರಸ

ನಿಂಬೆಯಂತೆ ಕಿತ್ತಳೆ ಹಣ್ಣಿನಲ್ಲೂ ವಿಟಮಿನ್ ಸಿ ಹೆಚ್ಚಾಗಿದ್ದು ಲಭ್ಯವಿದ್ದರೆ ಆಯಾಸ ನೀಗಿಸಲು ಕಿತ್ತಳೆ ರಸವನ್ನೂ ಸೇವಿಸಬಹುದು.

ನೀರು

ಮನೆಯಲ್ಲಿ ಹಣ್ಣು, ತರಕಾರಿಗಳು ಲಭ್ಯವಿಲ್ಲದ್ದಾಗ ಒಂದು ಲೋಟ ನೀರಿನಲ್ಲಿ ಸ್ವಲ್ಪ ಸಕ್ಕರೆ, ಚಿಟಿಕೆ ಉಪ್ಪು ಹಾಕಿ ಕುಡಿದ್ರೆ ಕೂಡಲೇ ಆಯಾಸ ನಿವಾರಣೆಯಾಗುತ್ತದೆ.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story