ಬೆಂಡೆಕಾಯಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸೇವನೆಯಿಂದ ಅನೇಕ ರೋಗಗಳನ್ನು ಗುಣಪಡಿಸಿಕೊಳ್ಳಬಹುದು.
ಪ್ರೋಟೀನ್, ಕ್ಯಾಲ್ಶಿಯಂ, ಫಾಸ್ಫೋರಸ್, ಕಾರ್ಬೋಹೈಡ್ರೆಟ್,ವಿಟಮಿನ್ ಸಿ, ವಿಟಮಿನ್ ಬಿ,ಮುಂತಾದ ಪೋಷಕ ತತ್ವ ಬೆಂಡೆಕಾಯಿಯಲ್ಲಿ ಅಡಗಿದೆ.
ಬೆಂಡೆಕಾಯಿಯನ್ನು ಬೇಯಿಸಿದ ನೀರನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುವುದು.
ಈ ನೀರು ದೇಹದ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ದೌರ್ಬಲ್ಯವನ್ನು ಕೂಡಾ ದೂರ ಮಾಡುತ್ತದೆ.
ಈ ನೀರಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದರ ಸೇವನೆಯಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಉದರದ ಸಮಸ್ಯೆಗಳಿಂದ ಇದು ಮುಕ್ತಿ ನೀಡುತ್ತದೆ.
ಮಲಬದ್ದತೆ ಸಮಸ್ಯೆ ನಿವಾರಣೆಗೆ ಕೂಡಾ ಈ ನೀರು ಸಹಾಯ ಮಾಡುತ್ತದೆ.
ಎರಡು ಲೋಟ ನೀರನ್ನು ತೆಗೆದುಕೊಂಡು ಬಿಸಿ ಮಾಡಿ. ಈ ನೀರಿನೊಳಗೆ ತುಂಡು ಮಾಡಿದ ಬೆಂಡೆಕಾಯಿಗಳನ್ನು ಹಾಕಿ. ನಂತರ 2 ನಿಮಿಷಗಳವರೆಗೆ ಈ ನೀರನ್ನು ಮತ್ತೆ ಚೆನ್ನಾಗಿ ಕುದಿಸಿ.
ಬೆಂಡೆಕಾಯಿಯ ಎಲ್ಲಾ ರಸ ಈ ನೀರಿನೊಳಗೆ ಬಿಟ್ಟ ನಂತರ ಇದನ್ನು ಸೋಸಿಕೊಳ್ಳಿ. ಊಟಕ್ಕೂ 30 ನಿಮಿಷ ಮುನ್ನ ಈ ನೀರನ್ನು ಸೇವಿಸಿ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.