ಶೀತ ಮತ್ತು ಕೆಮ್ಮಿನ ಕಾರಣದಿಂದ ಕಫ ಎದೆಯಲ್ಲಿ ಶೇಖರಣೆಯಾಗಲು ಪ್ರಾರಂಭಿಸುತ್ತದೆ.
ಅನೇಕ ಬಾರಿ ಎದೆಯಲ್ಲಿ ನೋವು ಮತ್ತು ಬಿಗಿತದ ಸಮಸ್ಯೆ ಪ್ರಾರಂಭವಾಗುತ್ತದೆ.
ಕಫ ದೀರ್ಘಕಾಲದವರೆಗೆ ಎದೆಯಲ್ಲಿ ಶೇಖರಣೆಗೊಂಡರೆ ಉಸಿರಾಟಕ್ಕೂ ತೊಂದರೆಯಾಗುತ್ತದೆ.
ಎದೆಯಲ್ಲಿ ಸಂಗ್ರಹವಾದ ಕಫದ ಸಮಸ್ಯೆಯನ್ನು ಕಡಿಮೆ ಮಾಡಲು,ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಬೆರೆಸಿ ಕುಡಿಯಬಹುದು.ಇದು ಕಫವನ್ನು ಕರಗಿಸಿ ಬಾಯಿಯಿಂದ ಹೊರಹಾಕುವುದಕ್ಕೆ ಅನುವು ಮಾಡಿಕೊಡುತ್ತದೆ.
ಸ್ಟೀಮ್ ತೆಗೆದುಕೊಳ್ಳುವುದರಿಂದ ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ತೆಗೆದುಹಾಕಬಹುದು. ಸ್ಟೀಮ್ ತೆಗೆದುಕೊಳ್ಳುವಾಗ ಪುದೀನಾ ಎಣ್ಣೆಯನ್ನು ಬೆರೆಸಿದೆ ಕಫ ಬೇಗನೆ ಕರಗುತ್ತದೆ.
ಶುಂಠಿ ಚಹಾದ ಸೇವನೆಯಿಂದ ಎದೆಯಲ್ಲಿ ಸಂಗ್ರಹವಾದ ಕಫವನ್ನು ತೆಗೆದುಹಾಕಬಹುದು.
ಕಫದ ಸಮಸ್ಯೆ ಬಾಧಿಸುತ್ತಿದ್ದರೆ ನೀಲಗಿರಿ ಎಣ್ಣೆಯನ್ನು ಬಳಸಬಹುದು. ನೀಲಗಿರಿ ಎಣ್ಣೆಯಲ್ಲಿರುವ ಗುಣಲಕ್ಷಣಗಳು ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ತೆಗೆದುಹಾಕುವುದಕ್ಕೆ ಸಹಾಯ ಮಾಡುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ZEE NEWS ಅದನ್ನು ಖಚಿತಪಡಿಸುವುದಿಲ್ಲ.