ತುಳಸಿ ಕಟ್ಟೆ ಬಳಿ ಅಪ್ಪಿತಪ್ಪಿ ಈ ಗಿಡ ನೆಟ್ಟರೂ ದರಿದ್ರ ಒಕ್ಕರಿಸುವುದು ಗ್ಯಾರಂಟಿ...!

Yashaswini V
Dec 20,2024

ಮನೆಯಲ್ಲಿ ತುಳಸಿ

ವಿಷ್ಣು ಪ್ರಿಯೆಯಾದ ತುಳಸಿ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ನಿತ್ಯ ತುಳಸಿಗೆ ಪೂಜಿಸುವುದರಿಂದ ಅಂತಹ ಮನೆಯಲ್ಲಿ ಸದಾ ಸಂಪತ್ತು ತುಂಬಿರುತ್ತದೆ. ಮನೆ ಏಳ್ಗೆಯಾಗುತ್ತದೆ ಎಂಬುದು ನಂಬಿಕೆ.

ತುಳಸಿ ಸಸ್ಯ

ವೈದಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯಯಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ನೆಲೆಸಿರುತ್ತಾಳೆ.

ತುಳಸಿ ಪೂಜೆ

ತುಳಸಿ ಸಸ್ಯವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರಿಂದ ಹಿಡಿದು ತುಳಸಿ ಪೂಜೆಯನ್ನು ಹೇಗೆ ಮಾಡಬೇಕು ಎನ್ನುವವರೆಗೂ ಹಲವು ನಿಯಮಗಳಿವೆ.

ತುಳಸಿ ಕಟ್ಟೆ

ವಾಸ್ತು ಪ್ರಕಾರ, ತುಳಸಿ ಕಟ್ಟೆ ಸನಿಹದಲ್ಲಿ ಈ ಒಂದು ಗಿಡ ಇದ್ದರೆ ಮನೆಯಲ್ಲಿ ಅದೃಷ್ಟದ ಬದಲಿಗೆ ಮನೆಯಲ್ಲಿ ಅನಿಷ್ಟ, ದರಿದ್ರ ಒಕ್ಕರಿಸುತ್ತದೆ ಎನ್ನಲಾಗುತ್ತದೆ.

ಶಮಿ ಸಸ್ಯ

ತುಳಸಿ ಸಸ್ಯದಷ್ಟೇ ಶ್ರೇಷ್ಠ ಸಸ್ಯ ಎಂದು ಪರಿಗಣಿಸಲಾಗುವ ಶಮಿ ಸಸ್ಯವನ್ನು ತುಳಸಿ ಗಿಡದ ಬಳಿ ಬೆಳೆಸುವುದರಿಂದ ಅದೃಷ್ಟದ ಬದಲಿಗೆ ದರಿದ್ರ ಹೆಚ್ಚಾಗುತ್ತದೆ.

ಶಮಿ ಸಸ್ಯದೊಂದಿಗೆ ತುಳಸಿ ಪೂಜೆ

ತುಳಸಿ ಗಿಡದೊಂದಿಗೆ ಶಮಿ ಸಸ್ಯವನ್ನು ಎಂದಿಗೂ ಪೂಜಿಸಬಾರದು. ಇದರಿಂದ ಜೀವನದಲ್ಲಿ ಕಷ್ಟಗಳು ಹೆಚ್ಚಾಗಿ, ಆರ್ಥಿಕ ಸಮಸ್ಯೆ ಉಲ್ಬಣಿಸುತ್ತದೆ ಎನ್ನಲಾಗುತ್ತದೆ.

ತುಳಸಿ, ಶಮಿ

ಪುರಾಣಗಳ ಪ್ರಕಾರ, ತುಳಸಿ ಗಿಡ ಭಗವಾನ್ ವಿಷ್ಣು, ಲಕ್ಷ್ಮಿಗೆ ಸಂಬಂದಿಸಿದ ಸಸ್ಯ. ಅದರಂತೆ ಶಮಿ ಸಸ್ಯ ಶಿವ ಹಾಗೂ ಶನಿಗೆ ಸಂಬಂಧಿಸಿದ ಸಸ್ಯವಾಗಿದೆ. ಇವೆರಡನ್ನೂ ಪ್ರತ್ಯೇಕವಾಗಿ ಪೂಜಿಸುವುದರಿಂದ ಒಳ್ಳೆಯ ಫಲ ದೊರೆಯುತ್ತದೆ.

ಮುಳ್ಳಿನ ಸಸ್ಯಗಳು

ತುಳಸಿ ಗಿಡದೊಂದಿಗೆ ಶಮಿ ಸಸ್ಯವಲ್ಲದೆ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ಇಡುವುದನ್ನು ಸಹ ನಿಷೇಧಿಸಲಾಗಿದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story