ಚಳಿಗಾಲದಲ್ಲಿ ದಿನವಿಡೀ ಬಿಸಿನೀರು ಕುಡಿಯುತ್ತೀರಾ! ಹಾಗಿದ್ದರೆ ಎಚ್ಚರಿಕೆ!
ಗಂಟಲು ನೋವು, ಕೆಮ್ಮು, ನೆಗಡಿ ಸೇರಿದಂತೆ ಚಳಿಗಾಲದಲ್ಲಿ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ಜನರು ಹೆಚ್ಚಾಗಿ ಬಿಸಿನೀರು ಕುಡಿಯುತ್ತಾರೆ. ಆದರೆ, ಚಳಿಗಾಲದಲ್ಲಿ ದಿನವಿಡೀ ಬಿಸಿನೀರು ಕುಡಿಯುವುದರಿಂದ ನಿಮ್ಮ ಆರೋಗಕ್ಕೆ ಹಾನಿಯಾಗಬಹುದು ಎಂದು ನಿಮಗೆ ತಿಳಿದಿದೆಯೇ?
ಬಿಸಿ ನೀರು ಕುಡಿಯುವುದು ಗಂಟಲು ನೋವನ್ನೇನೋ ಕಡಿಮೆ ಮಾಡುತ್ತದೆ. ಆದರೆ, ತುಂಬಾ ಬಿಸಿ ಬಿಸಿ ನೀರು ಕುಡಿಯುವುದರಿಂದ ಗಂಟಲಿನಲ್ಲಿ ಆಂತರಿಕ ಉರಿ ಉಂಟಾಗುತ್ತದೆ.
ರಾತ್ರಿ ಮಲಗುವ ಸಮಯದಲ್ಲಿ ಬಿಸಿ ನೀರು ಕುಡಿಯುವುದರಿಂದ ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗಬಹುದು.
ಬಾಯಾರಿಕೆಯಾಗದಿದ್ದಾಗ ನೀವು ಹೆಚ್ಚು ಬಿಸಿನೀರನ್ನು ಸೇವಿಸಿದರೆ, ಅದು ನಿಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಅತಿಯಾದ ಬಿಸಿನೀರಿನ ಸೇವನೆಯು ಕರುಳಿನಂತಹ ಆಂತರಿಕ ಅಂಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಮೂತ್ರಪಿಂಡದ ಕ್ಯಾಪಿಲ್ಲರಿ ವ್ಯವಸ್ಥೆಯು ನಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ಫಿಲ್ಟರ್ ಮಾಡಲು ಕೆಲಸ ಮಾಡುತ್ತದೆ. ಆದರೆ ನೀವು ದಿನವಿಡೀ ಬಿಸಿನೀರನ್ನು ಸೇವಿಸಿದಾಗ, ಅದು ನಿಮ್ಮ ಮೂತ್ರಪಿಂಡದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.
ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.