ರುಚಿಕರವಾದ ಖರ್ಜೂರ ಪಾಯಸ ಮಾಡುವ ವಿಧಾನ

Chetana Devarmani
Dec 18,2024

ಖರ್ಜೂರದ ಪಾಯಸ

ಪಾಯಸ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಶತಮಾನಗಳಷ್ಟು ಹಳೆಯದಾದ ಸಿಹಿಯಾಗಿದೆ. ಇದನ್ನು ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ. ಇಂದು ಖರ್ಜೂರದ ಪಾಯಸ ಮಾಡುವ ವಿಧಾನ ತಿಳಿಯೋಣ...

ಖರ್ಜೂರದ ಪಾಯಸ

ಖರ್ಜೂರದ ಪಾಯಸ ತುಂಬಾ ಸುಲಭವಾದ ಪಾಯಸದ ರೆಸಿಪಿಯಾಗಿದ್ದು, ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದನ್ನು ವಿಶೇಷವಾಗಿ ಲಕ್ಷ್ಮೀ ಪೂಜೆಯ ಸಮಯದಲ್ಲಿ ತಯಾರಿಸಬಹುದು. ಹಬ್ಬಗಳ ಸಮಯದಲ್ಲಿ ನಿಮ್ಮ ಅತಿಥಿಗಳಿಗೆ ನೀಡಬಹುದು.

ಖರ್ಜೂರದ ಪಾಯಸ

ಖರ್ಜೂರ 15, ಹಾಲು 2 ಕಪ್, 1/4 ಕಪ್ ತೆಂಗಿನ ಹಾಲು, ಗೋಡಂಬಿ 1 ಚಮಚ, ಬಾದಾಮಿ 1 ಚಮಚ, ತುಪ್ಪ 1 ಚಮಚ, ಏಲಕ್ಕಿ ಪುಡಿ 1 ಚಿಟಿಕೆ.

ಖರ್ಜೂರದ ಪಾಯಸ

ಮೊದಲನೆಯದಾಗಿ ಖರ್ಜೂರವನ್ನು ಅರ್ಧ ಕಪ್ ಬಿಸಿ ಹಾಲಿನಲ್ಲಿ 20 ರಿಂದ 30 ನಿಮಿಷಗಳ ಕಾಲ ನೆನೆಸಿಡಿ. ನಂತರ ನೆನೆಸಿದ ಖರ್ಜೂರವನ್ನು ಸ್ವಲ್ಪ ಹಾಲಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ಮತ್ತು ನಯವಾದ ಪೇಸ್ಟ್ ಮಾಡಿ.

ಖರ್ಜೂರದ ಪಾಯಸ

ಉಳಿದ ಹಾಲನ್ನು ಕುದಿಸಿ. ಹಾಲು ಕುದಿಯುವಾಗ, ಉರಿಯನ್ನು ಕಡಿಮೆ ಮಾಡಿ ಮತ್ತು ಹಾಲಿಗೆ ಖರ್ಜೂರದ ಪೇಸ್ಟ್ ಅನ್ನು ಸೇರಿಸಿ. ಚೆನ್ನಾಗಿ ಕೈಯಾಡಿಸುತ್ತಿರಿ. ತಳ ಹಿಡಿಯಬಾರದು.

ಖರ್ಜೂರದ ಪಾಯಸ

ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು 7 ರಿಂದ 8 ನಿಮಿಷಗಳ ಕಾಲ ಬೇಯಿಸಿ. ಉರಿ ಸಣ್ಣದಾಗೇ ಇರಬೇಕು.

ಖರ್ಜೂರದ ಪಾಯಸ

ಸಣ್ಣಗೆ ಕತ್ತರಿಸಿದ ಬಾದಾಮಿ, ಗೋಡಂಬಿ, ಏಲಕ್ಕಿ ಪುಡಿ ಮತ್ತು ತೆಂಗಿನ ಹಾಲು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು 2 ನಿಮಿಷ ಬೇಯಿಸಿ. ಗ್ಯಾಸ್ ಆಫ್ ಮಾಡಿ.

ಖರ್ಜೂರದ ಪಾಯಸ

ಖರ್ಜೂರ ಸೇವನೆ ಮೂಳೆಗಳ ಆರೋಗ್ಯ ಸುಧಾರಿಸುವುದು. ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೋಸ್ಪರಸ್ ನಂತಹ ಖನಿಜಾಂಶಗಳು ಇದರಲ್ಲಿ ಕಂಡುಬರುತ್ತವೆ.

ಖರ್ಜೂರದ ಪಾಯಸ

ಖರ್ಜೂರದ ಪಾಯಸವನ್ನು ಮಧುಮೇಹಿಗಳು ನಿರಾತಂಕವಾಗಿ ಸೇವಿಸಬಹುದು. ತೂಕ ಇಳಿಕೆಗೂ ಖರ್ಜೂರ ಸಹಾಯಕವಾಗಿದೆ.

VIEW ALL

Read Next Story