ಅಕ್ಕಿಯನ್ನು ಬೇಯಿಸುವ ಪ್ರಕ್ರಿಯೆಯನ್ನು ಬದಲಾಯಿಸುವ ಮೂಲಕ ಹೆಚ್ಚುವರಿ ತೂಕವನ್ನು ಇಳಿಕೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
ಬಿಳಿ ಅಕ್ಕಿಯನ್ನು ಬೇಯಿಸುವಾಗ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು ಬೇಯಿಸಿದ ನಂತರ ಅದನ್ನು ರೆಫ್ರಿಜರೇಟರ್’ನಲ್ಲಿ ಇರಿಸಿದರೆ ಅಕ್ಕಿಯ ಕ್ಯಾಲೋರಿ ಅಂಶವನ್ನು ಕಡಿಮೆ ಮಾಡಬಹುದು.
ಮೊದಲು ಅಕ್ಕಿಯನ್ನು ನೆನೆಸಿಟ್ಟು, ಬಳಿಕ ಅದನ್ನು ಬೇಯಿಸಿ ಸೇವಿಸಿದರೆ ತೂಕ ಇಳಿಕೆ ಮಾಡಿಕೊಳ್ಳಬಹುದು.
ಇನ್ನೊಂದು ವಿಧಾನವೆಂದರೆ ಹೆಚ್ಚು ನೀರನ್ನು ಬಳಕೆ ಮಾಡಿ ಅಕ್ಕಿಯನ್ನು ಬೇಯಿಸುವುದು. ಅಂದರೆ ನಿಮ್ಮ ಆದ್ಯತೆಗೆ ಅನುಗುಣವಾಗಿ ಪ್ರತಿ ಕಪ್ ಅಕ್ಕಿಗೆ ಸುಮಾರು 6-10 ಕಪ್ ನೀರನ್ನು ಬಳಸಿ. ನಂತರ ಸುಮಾರು 15 ನಿಮಿಷಗಳ ಕಾಲ ಅಕ್ಕಿಯನ್ನು ಮುಚ್ಚದೆ ಕುದಿಸಿ.
ಈ ಮೂರು ಪ್ರಕ್ರಿಯೆಯನ್ನು ಅನುಸರಿಸಿ ಅನ್ನವನ್ನು ಸೇವಿಸಿದರೆ, ಕೊಬ್ಬಿನಾಂಶ ದೇಹಕ್ಕೆ ಸೇರಿಕೊಳ್ಳುವುದಿಲ್ಲ. ಈ ಮೂಲಕ ಸುಲಭವಾಗಿ ತೂಕ ಇಳಿಕೆ ಮಾಡಿಕೊಳ್ಳಬಹುದು.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.