ಭಾರತೀಯ ಸಿನಿರಂಗದ ಸ್ಟಾರ್ ನಟಿಯರಲ್ಲಿ ಶೋಭಿತಾ ಧೂಳಿಪಾಲ ಕೂಡ ಒಬ್ಬರು. ತಮ್ಮ ಅದ್ಭುತ ನಟನೆಯ ಮೂಲಕ ಸಿನಿ ಪ್ರೇಕ್ಷಕರ ಗಮನಸೆಳೆದಿದ್ದಾಳೆ
ʼರಮಣ್ ರಾಘವ್ 2.0ʼ ಎಂಬ ಥ್ರಿಲ್ಲರ್ ಸಿನಿಮಾದ ಮೂಲಕ ಶೋಭಿತಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಶೋಭಿತಾ ಆಗಾಗ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ.
ಸಧ್ಯ ನೀಲಿ ಸೀರೆಯುಟ್ಟ ಸುಂದರಿಯ ಫೋಟೋಸ್ ಇಂಟರ್ನೆಟ್ನಲ್ಲಿ ಹೈಪ್ ಕಿಯೇಟ್ ಮಾಡುತ್ತಿವೆ.
ಶೋಭಿತಾ ಅವರ ಮೇಡ್ ಇನ್ ಹೆವನ್ (2019, 2023) ಅಮೆಜಾನ್ ವೆಬ್ ಸರಣಿ ಓಟಿಟಿ ಪ್ರೇಕ್ಷಕರ ಗಮನ ಸೆಳೆದಿತ್ತು.
ಶೋಭಿತಾ ಧೂಳಿಪಾಲ ಅವರು 2013 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಅರ್ಥ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಮಣಿರತ್ನಂ ನಿರ್ದೇಶನದ ಅದ್ಭುತ ಸಿನಿಮಾ ʼಪೊನ್ನಿಯಿನ್ ಸೆಲ್ವನ್ʼನಲ್ಲಿಯೂ ಶೋಭಿತಾ ನಟಿಸಿದ್ದಾರೆ.
ಮೇ 31 1992 ರಂದು ಆಂಧ್ರ ಪ್ರದೇಶದ ತೆನಾಲಿಯಲ್ಲಿ ಈ ತೆಲುಗು ಪಿಲ್ಲಾ ಶೋಭಿತಾ ಜನಿಸಿದರು.
ನಟನೆಯಷ್ಟೇ ಅಲ್ಲದೆ ಭರತನಾಟ್ಯ ಮತ್ತು ಕೂಚಿಪೂಡಿ ನೃತ್ಯದಲ್ಲೂ ಸಹ ಶೋಭಿತಾ ಪ್ರಾವಿಣ್ಯತೆ ಹೊಂದಿದ್ದಾರೆ.