ಕಾಳುಮೆಣಸು ಆರೋಗ್ಯ ಪ್ರಯೋಜನ

ಕಾಳುಮೆಣಸಿಗೆ ಬೆಲ್ಲ ಬೆರೆಸಿ ತಿಂದರೆ ಮಳೆಗಾಲದ ಈ ಕಾಯಿಲೆಗೆ ಸಿಗುತ್ತೆ ಮುಕ್ತಿ!

ಕಾಳುಮೆಣಸು ಆರೋಗ್ಯ ಪ್ರಯೋಜನ

ಮಳೆಗಾಲದಲ್ಲಿ ಹಲವು ರೋಗಗಳ ಭೀತಿ ಹೆಚ್ಚುತ್ತದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಜಾಗೃತರಾಗಬೇಕು.

ಕಾಳುಮೆಣಸು ಆರೋಗ್ಯ ಪ್ರಯೋಜನ

ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಈ ದಿನಗಳಲ್ಲಿ ವಿಶೇಷ ಗಮನ ಬೇಕು. ವೈರಲ್ ಜ್ವರ, ನೆಗಡಿ-ಕೆಮ್ಮು ಮುಂತಾದ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.

ಕಾಳುಮೆಣಸು ಆರೋಗ್ಯ ಪ್ರಯೋಜನ

ಕಾಳುಮೆಣಸು ಮತ್ತು ಬೆಲ್ಲವನ್ನು ಒಟ್ಟಿಗೆ ತಿನ್ನುವುದರಿಂದ ಈ ಸಮಸ್ಯೆಗಳನ್ನು ದೂರ ಮಾಡಬಹುದು. ಬೆಲ್ಲ ಮತ್ತು ಕಾಳುಮೆಣಸಿನ ಸೇವನೆ ಅನೇಕ ಗಂಭೀರ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ..

ಕಾಳುಮೆಣಸು ಆರೋಗ್ಯ ಪ್ರಯೋಜನ

ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯನ್ನು ನಿವಾರಿಸಲು ಮೆಣಸು ಮತ್ತು ಬೆಲ್ಲವನ್ನು ಒಟ್ಟಿಗೆ ತಿನ್ನಲಾಗುತ್ತದೆ. ಇದಕ್ಕೆ ಒಂದು ಲೋಟ ಬಿಸಿ ನೀರಿಗೆ ಒಂದು ತುಂಡು ಬೆಲ್ಲ ಮತ್ತು ಚಿಟಿಕೆ ಕರಿಮೆಣಸಿನ ಪುಡಿ ಹಾಕಿ ಕುಡಿದರೆ ಕೆಲವೇ ದಿನಗಳಲ್ಲಿ ಪರಿಹಾರ ಸಿಗುತ್ತದೆ.

ಕಾಳುಮೆಣಸು ಆರೋಗ್ಯ ಪ್ರಯೋಜನ

50 ಗ್ರಾಂ ಬೆಲ್ಲದ ಪುಡಿ ಮತ್ತು 20 ಗ್ರಾಂ ಕಾಳುಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಮತ್ತು ಈ ಮಿಶ್ರಣವನ್ನು ಬೆಚ್ಚಗಿನ ನೀರಿನಲ್ಲಿ ತೆಗೆದುಕೊಳ್ಳುವುದರಿಂದ ಪರಿಹಾರ ಸಿಗುತ್ತದೆ.

ಕಾಳುಮೆಣಸು ಆರೋಗ್ಯ ಪ್ರಯೋಜನ

ಬೆಲ್ಲದಲ್ಲಿರುವ ಉತ್ತಮ ಕ್ಯಾಲ್ಸಿಯಂ ಮತ್ತು ರಂಜಕವು ಕೀಲು ನೋವನ್ನು ಕಡಿಮೆ ಮಾಡುತ್ತದೆ. ಕರಿಮೆಣಸಿನಲ್ಲಿರುವ ಉರಿಯೂತ ನಿವಾರಕ ಗುಣಗಳು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಾಳುಮೆಣಸು ಆರೋಗ್ಯ ಪ್ರಯೋಜನ

ಬೆಲ್ಲ, ಕರಿಮೆಣಸು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯು ಹೈಡ್ರೋಕ್ಲೋರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ.

ಕಾಳುಮೆಣಸು ಆರೋಗ್ಯ ಪ್ರಯೋಜನ

ಬೆಲ್ಲ ಮತ್ತು ಕಾಳುಮೆಣಸಿನ ಸಂಯೋಜನೆಯು ಹೊಟ್ಟೆ ನೋವು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.

ಕಾಳುಮೆಣಸು ಆರೋಗ್ಯ ಪ್ರಯೋಜನ

ಗಮನಿಸಿ: ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ. zee kannada news ಇದಕ್ಕೆ ಹೊಣೆಯಲ್ಲ.

VIEW ALL

Read Next Story