ಮೆಂತ್ಯ ಬೀಜಗಳನ್ನು ನೆನೆಸಿಟ್ಟು ಬಳಸಿದರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಮೆಂತ್ಯ ಬೀಜಗಳು

ಮೆಂತ್ಯ ಬೀಜಗಳಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಬಿ 6 ಸಮೃದ್ಧವಾಗಿದೆ.

ಮಧುಮೇಹ

ಮಧುಮೇಹ ಇರುವವರು ರಾತ್ರಿ 2 ಸ್ಪೂನ್ ಮೆಂತ್ಯವನ್ನು ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ಖಾಲಿ ಹೊಟ್ಟೆಯಲ್ಲಿ ಆ ನೀರು ಕುಡಿದು, ಮೆಂತ್ಯ ಬೀಜಗಳನ್ನು ಅಗಿದು ತಿನ್ನುವುದು ಪ್ರಯೋಜನಕಾರಿ.

ಹಾಲುಣಿಸುವ ತಾಯಂದಿರು

ಮೆಂತ್ಯ ಬೀಜ ಮತ್ತು ಎಲೆ ಎರಡೂ ಎದೆಹಾಲು ಉತ್ಪಾದನೆಯಲ್ಲಿ ಲಾಭದಾಯಕ. ಇದಕ್ಕಾಗಿ ರಾತ್ರಿ ಒಂದು ಲೋಟ ನೀರಿನಲ್ಲಿ 1 ಸ್ಪೂನ್ ಮೆಂತ್ಯ ನೆನೆಸಿ ಬೆಳಿಗ್ಗೆ ಚೆನ್ನಾಗಿ ಕುದಿಸಿ ಸ್ವಲ್ಪ ಬೆಚ್ಚಗಿರುವಾಗಲೇ ಆ ನೀರನ್ನು ಕುಡಿಯಬೇಕು.

ಕೊಲೆಸ್ಟ್ರಾಲ್

ಮೆಂತ್ಯದಲ್ಲಿ ಕರಗುವ ಫೈಬರ್ ಸಮೃದ್ಧವಾಗಿದ್ದು ನಿತ್ಯ ನೆನೆಸಿಟ್ಟ ಮೆಂತ್ಯ ಬೀಜಗಳ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು.

ಹೃದಯದ ಆರೋಗ್ಯ

ಒಂದೂವರೆ ಕಪ್ ನೀರಿನಲ್ಲಿ ಒಂದು ಚಮಚ ಮೆಂತ್ಯ ಬೀಜಗಳನ್ನು ಹಾಕಿ ಚೆನ್ನಾಗಿ ಕುದಿಸಿ ಚಹಾ ತಯಾರಿಸಿ ಕುಡಿಯುವುದರಿಂದ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ.

ಸಂಧಿವಾತ

ಮೆಂತ್ಯ ಬೀಜಗಳಲ್ಲಿ ಡಯೋಸ್ಜೆನಿನ್ ಎಂದು ಕರೆಯಲ್ಪಡುವ ಸಂಯುಕ್ತವಿದ್ದು ನಿತ್ಯ ಇದರ ಸೇವನೆಯು ಸಂಧಿವಾತದ ನೋವಿನಿಂದ ಪರಿಹಾರ ನೀಡುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story