ಔಷಧಿಯಿಲ್ಲದೆ ನೈಸರ್ಗಿಕ ರೀತಿಯಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಈ ಪಾನೀಯಗಳನ್ನು ಸೇವಿಸಬಹುದು.
ಕೆನೆ ರಹಿತ ಹಾಲು ಮತ್ತು ಕೊಬ್ಬಿನಾಂಶ ಕಡಿಮೆ ಇರುವ ಇತರ ಡೈರಿ ಉತ್ಪನ್ನಗಳನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ನಿತ್ಯ ಒಂದು ಲೋಟ ಟೊಮ್ಯಾಟೋ ಜ್ಯೂಸ್ ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ರಕ್ತದೊತ್ತಡವನ್ನು ಕೂಡಾ ನಿಯಂತ್ರಿಸುತ್ತದೆ.
ದಾಸಾವಳದ ಹೂವನ್ನು ಚೆನ್ನಾಗಿ ಕುದಿಸಿ ಆ ನೀರನ್ನು ಸೇವಿಸುವ ಮೂಲಕ ಕೂಡಾ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ದಾಳಿಂಬೆ ಜ್ಯೂಸ್ ಉರಿಯೂತಡ ಪರಿಣಾಮವನ್ನು ಹೊಂದಿದೆ. ಇದು ರಕ್ತದೊತ್ತಡವನ್ನು ಸುಲಭವಾಗಿ ನಿಯಂತ್ರಿಸುತ್ತದೆ.
ಬೀಟ್ರೂಟ್ ಜ್ಯೂಸ್ ಅಪಧಮನಿಯ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ನೈಟ್ರೇಟ್ ಗಳಿದ್ದು, ಇದರ ಸೇವನೆ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಉತ್ಕರ್ಷಣ ನಿರೋಧಕಗಳ ಸಮೃದ್ದ ಮೂಲ. ಕ್ಯಾನ್ ಬೆರಿಗಳು ಹೃದಯ ರಕ್ತನಾಳದ ರಕ್ಷಣಾತ್ಮಕ ಗುಣಗಳನ್ನು ಹೊಂದಿದ್ದು, ಅದು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.