ಮಾವಿನ ಹಣ್ಣಿನ ಪ್ರಯೋಜನಗಳು
ತಿನ್ನಲು ಬಲು ರುಚಿಕರವಾದ ಮಾವಿನ ಹಣ್ಣು ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ
ಮಾವಿನ ಹಣ್ಣು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಳಪಡಿಸುತ್ತದೆ.
ಮಾವಿನ ಹಣ್ಣಿನ ಸೇವನೆಯಿಂದ ಇದು ಮಲಬದ್ಧತೆಯಿಂದ ಪಅರಿಹಾರವನ್ನು ನೀಡುತ್ತದೆ.
ಮಾಗಿದ ಮಾವಿನಕಾಯಿಯನ್ನು ಕೆಂಡದಲ್ಲಿ ಸುಟ್ಟು ಅದು ತಣ್ಣಗಾದ ಬಳಿಕ ಸಿಪ್ಪೆ ಸುಲಿದು ನಿಧಾನವಾಗಿ ಅದರ ರಸ ಸವಿದರೆ, ಒಣ ಕೆಮ್ಮು ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.
ಮಾವಿನ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಮೂರು ವಾರಗಳ ಕಾಲ 5 ಗ್ರಾಂ ಪುಡಿಗೆ ನೀರು ಬೆರೆಸಿ ಕುಡಿಯುವುದರಿಂದ ಮಧುಮೇಹಕ್ಕೆ ಪರಿಹಾರವನ್ನು ಪಡೆಯಬಹುದು.
ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.