ಇಂದಿನ ಯುವಕರು ಊಟವನ್ನು ಬೇಕಾದರು ಬಿಟ್ಟಿರುತ್ತಾರೆ ಆದರೆ ಮೊಬೈಲ್ ಉಪಯೋಗಿಸುವುದನ್ನು ಎಂದಿಗೂ ಬಿಟ್ಟಿರಲಾರರು.ಅತಿಯಾದ ಮೊಬೈಲ್ ಬಳಕೆಯಿಂದ ಆರೋಗ್ಯಕ್ಕೆ ಹೆಚ್ಚಿನ ಅಪಾಯ ಸಂಭವಿಸುತ್ತದೆ.

Zee Kannada News Desk
Feb 14,2024

ಉರಿಯೂತ

ಇಂದಿನ ಯುವಜನಾಂಗದವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವುದಕ್ಕೆ ಮುಖ್ಯಕಾರಣವೇ ಅತಿಯಾದ ಮೊಬೈಲ್ ಬಳಕೆಯಿಂದ,ಮೊಬೈಲ್ ಬಳಸುವುದರಿಂದ ದೇಹದಲ್ಲಿ ಉರಿಯೂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಮಾನಸಿಕ ಒತ್ತಡ

ಅತಿಯಾಗಿ ಮೊಬೈಲ್ ಚಟಕ್ಕೆ ಒಳಗಾಗಿರುವುದರಿಂದ ಇದರಿಂದ ಮಾನಸಿಕ ಒತ್ತಡವು ಹೆಚ್ಚಾಗುತ್ತಲೇ ಇರುತ್ತದೆ.ಮೊಬೈಲ್ ಬಳಕೆ ಕಡಿಮೆ ಮಾಡಿ,ಹೆಚ್ಚಿನ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ.

ರಸ್ತೆ ಅಪಘಾತ

ಮೊಬೈಲ್ ಫೋನ್ ನೋಡಿಕೊಂಡು ವಾಹನ ಚಲಾಯಿಸುತ್ತಿದ್ದರೆ ಹೆಚ್ಚಿನ ಅಪಘಾತಗಳು ಸಂಬಿಸುತ್ತಿವೆ ಎಂದು ಈಗಾಗಲೇ ಸಾಬೀತಾಗಿದೆ.ಆದಷ್ಟು ಯಾವುದೇ ಕರೆಗಳು ಬಂದಾಗ ಒಮ್ಮೆ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ಮಾತನಾಡಿ

ಕ್ಯಾನ್ಸರ್

ಮೊಬೈಲ್ ಬಳಕೆಯಿಂದ ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಹೆಚ್ಚುತ್ತಿದ್ದೂ, ಕ್ಯಾನ್ಸರ್ ರೋಗಿಗಳಿಗೂ ಅಪಾಯ ಆಗುತ್ತದೆ.

ಕಣ್ಣಿಗೆ ಅಪಾಯ

ತಡರಾತ್ರಿಯಾದರೂ ಮಬೈಲ್ ಬಳಸುವುದನ್ನು ನಿಲ್ಲಿಸಿರುವುದಿಲ್ಲ ಇದರಿಂದ ಕಣ್ಣಿನ ಉರಿ,ಸರಿಯಾದ ನಿದ್ರೆಯೂ ಬಾರದಿರಲು ಕಾರಣವಾಗುತ್ತಿದ್ದೂ ಕಣ್ಣಿನ ಮೇಲೆ ಹೆಚಿನ ಒತ್ತಡವನ್ನು ಸೃಷ್ಟಿ ಮಾಡುತ್ತದೆ.

ಅತಿಯಾದ ಬೊಜ್ಜು

ಯಾವುದೇ ಕೆಲಸ ಮಾಡದೇ,ಕೂತಲ್ಲಿಯೇ ದಿನನಿತ್ಯ ಮೊಬೈಲ್ ನೋಡುತ್ತಲೇ ಕಾಲಕಳೆಯುತ್ತಿದ್ದರೆ ದೇಹದಲ್ಲಿ ಅತಿಯಾದ ಬೊಜ್ಜು ಬೆಳೆಯಲು ಕಾರಣವಾಗುತ್ತದೆ.

ಚರ್ಮಕ್ಕೆ ಹಾನಿಕರ

ಅತಿಯಾಗಿ ಮೊಬೈಲ್ ಬಳಸುತ್ತಿದ್ದರೆ ಮುಖದ ಮೇಲೆ ಮೊಡವೆಗಳು ಸಂಭವಿಸುವುದಲ್ಲದೇ ನಿಮ್ಮ ತ್ವಚೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಮಕ್ಕಳ ಆರೋಗ್ಯ

ಇಂದಿನ ಮಕ್ಕಳು ಸಹ ಮೊಬೈಲ್‌ ಇಲ್ಲದೇ ಹೋದರೆ ಊಟವನ್ನೇ ಸೇವಿಸುದಿಲ್ಲ ಇದರಿಂದ ಮೆದುಳಿಗೆ ಹೆಚ್ಚಿನ ಹಾನಿಯುಂಟಾಗಿ ನೆನೆಪಿನ ಶಕ್ತಿ ಕುಗ್ಗಲು ಕಾರಣವಾಗುತ್ತದೆ.

VIEW ALL

Read Next Story