1. ಈ ಎಲೆಗಳ ಸೇವನೆಯಿಂದ ಮಂಗಮಾಯವಾಗುತ್ತವೆ 7 ಕಾಯಿಲೆಗಳು
2. ನುಗ್ಗೆ ಸೊಪ್ಪು ಪ್ರೊಟೀನ್ ಆಗರವಾಗಿದೆ.
3. ಇದರ ಎಲೆಗಳಲ್ಲಿ ಕ್ಯಾಲ್ಸಿಯಮ್, ಪೊಟ್ಯಾಶಿಯಮ್, ಫಾಸ್ಪರಸ್ ಹಾಗೂ ವಿಟಮಿನ್ ಗಳು ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ.
4. ನುಗ್ಗೆ ಸೊಪ್ಪು ಸೇವನೆಯಿಂದ ದೇಹಕ್ಕೆ ಯಾವ ಲಾಭಗಳು ಸಿಗುತ್ತವೆ ತಿಳಿದುಕೊಳ್ಳೋಣ
5. ನುಗ್ಗೆ ಸೊಪ್ಪು ಸೇವನೆಯಿಂದ ದೈಹಿಕ ದೌರ್ಬಲ್ಯ ಕಡಿಮೆಯಾಗುತ್ತದೆ
6. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
7. ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಗುಣಗಳು ಉರಿಯೂತವನ್ನು ಕಡಿಮೆಮಾಡುತ್ತವೆ.
8. ನುಗ್ಗೆ ಸೊಪ್ಪಿನಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ ಸಿ ಕಂಡು ಬರುತ್ತದೆ. ಹೀಗಾಗಿ ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
9. ಈ ಎಲೆಗಳಲ್ಲಿ ವಿಟಮಿನ್ ಎ ಕೂಡ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ. ಕಣ್ಣಿನ ಆರೋಗ್ಯಕ್ಕೆ ಇದು ಸಂಜೀವನಿ ಇದ್ದಂತೆ.
10. ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ-ಮಾಹಿತಿ ಆಧರಿಸಿದೆ, ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.