ನಮ್ಮಲ್ಲಿ ಅನೇಕರು ಪ್ರತಿದಿನ ಮೌತ್ ವಾಶ್ ಬಳಸುತ್ತಾರೆ. ಇದು ಹಲ್ಲುಗಳು, ಒಸಡುಗಳು ಮತ್ತು ಬಾಯಿಯನ್ನು ಸ್ವಚ್ಛಗೊಳಿಸಲು ಬಳಸುವ ದ್ರವ ಉತ್ಪನ್ನವಾಗಿದೆ. ಆಂಟಿಸೆಪ್ಟಿಕ್ ಸಾಮಾನ್ಯವಾಗಿ ಮೌತ್‌ವಾಶ್‌ನಲ್ಲಿ ಕಂಡುಬರುತ್ತದೆ. ಹೀಗಾಗಿ ನಮ್ಮ ನಾಲಿಗೆ ಮತ್ತು ಹಲ್ಲುಗಳ ನಡುವೆ ಇರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.
ದುರ್ವಾಸನೆಯ ಸಮಸ್ಯೆಯನ್ನು ನಿಭಾಯಿಸಲು ಸಹ ಅನೇಕ ಜನರು ಮೌತ್ ವಾಶ್ ಬಳಸುತ್ತಾರೆ. ಆದರೆ ಬಾಯಿಯ ನೈರ್ಮಲ್ಯದ ಬಳಸುವ ಮೌತ್‌ವಾಶ್ ಅನಾನುಕೂಲಗಳನ್ನು ಸಹ ಹೊಂದಿದೆ.
ಮೌತ್‌ವಾಶ್‌ನೊಂದಿಗೆ ಬರುವ ಅಳತೆಯ ಕಪ್ ಆಧಾರದಲ್ಲೇ ಆ ದ್ರವವನ್ನು ಬಳಸಿ. ಹೆಚ್ಚಾದರೆ ಹಾನಿಯನ್ನುಂಟು ಮಾಡುತ್ತದೆ. ಇನ್ನು ಅಪ್ಪಿತಪ್ಪಿಯೂ ಈ ನೀರನ್ನು ನುಂಗಬೇಡಿ.
ಅಮೇರಿಕನ್ ಹೆಲ್ತ್ ವೆಬ್‌ಸೈಟ್ everydayhealth.com ಪ್ರಕಾರ, ಮೌತ್‌ವಾಶ್ ಅನ್ನು ಬಳಸುವುದು ಹಲ್ಲುಕುಳಿಗಳ ಸಮಸ್ಯೆಯನ್ನು ಅಂದರೆ ಹಲ್ಲಿನ ಕೊಳೆಯುವಿಕೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮೌತ್‌ವಾಶ್‌ನಲ್ಲಿ ಫ್ಲೋರೈಡ್ ಅಂಶವಿದ್ದು ಇದು ಹಲ್ಲುಗಳನ್ನು ಕುಳಿಗಳಿಂದ ರಕ್ಷಿಸುತ್ತದೆ.
ಆದರೆ ಆಲ್ಕೋಹಾಲ್ ಒಳಗೊಂಡಿರುವ ಅನೇಕ ಮೌತ್‌ವಾಶ್‌ಗಳಿವೆ. ಇದರಿಂದಾಗಿ ಬಾಯಿಯ ಕ್ಯಾನ್ಸರ್ ಬರುವ ಅಪಾಯವಿದೆ. ಹೀಗಾಗಿ ದಂತವೈದ್ಯರನ್ನು ಸಂಪರ್ಕಿಸಿದ ನಂತರವೇ ಮೌತ್ ವಾಶ್ ಅನ್ನು ಬಳಸಬೇಕು.
ಬಾಯಿ ಹುಣ್ಣಿನ ಸಮಸ್ಯೆಯಿದ್ದರೆ ಮೌತ್ ವಾಶ್ ಬಳಸಬಾರದು. ಇದರಿಂದ ಹುಣ್ಣುಗಳಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳಬಹುದು.
ಅನೇಕ ಜನರು ಬಾಯಿಯ ದುರ್ವಾಸನೆಯಿಂದ ದೂರವಿರಲು ಮೌತ್ ವಾಶ್ ಅನ್ನು ಸಹ ಬಳಸುತ್ತಾರೆ. ಆದರೆ ಇದು ಅಲ್ಪಾವಧಿಗೆ ಮಾತ್ರ. ನೀವು ಸರಿಯಾಗಿ ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸದಿದ್ದರೆ, ಕೇವಲ ಮೌತ್ವಾಶ್ ಸಹಾಯದಿಂದ ಬಾಯಿಯ ದುರ್ವಾಸನೆ ತಪ್ಪಿಸಲು ಸಾಧ್ಯವಿಲ್ಲ.
ಯಾವುದೇ ಪರಿಹಾರವನ್ನು ಪ್ರಯತ್ನಿಸುವ ಮೊದಲು ಯಾವಾಗಲೂ ಪರಿಣಿತರು ಅಥವಾ ವೈದ್ಯರನ್ನು ಸಂಪರ್ಕಿಸಿ. Zee News ಈ ಮಾಹಿತಿಯ ಜವಾಬ್ದಾರಿಯನ್ನು ಪಡೆದುಕೊಳ್ಳುವುದಿಲ್ಲ