ಬಿಳಿ ಕೂದಲು ಮತ್ತೆ ಕಪ್ಪಾಗಲು ಒಗ್ಗರಣೆ ಡಬ್ಬಿಯಲ್ಲಿರುವ ಈ ಪುಟ್ಟ ಕಾಳು ಸಾಕು !
ಚಿಕ್ಕವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಅನೇಕ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ.
ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ಸಾಸಿವೆ ಬೀಜಗಳನ್ನು ಬಳಸಬಹುದು. ಇದು ಕೂದಲಿಗೆ ಬೇರುಗಳಿಂದ ಪೋಷಣೆಯನ್ನು ನೀಡುತ್ತದೆ.
ಕೂದಲು ಉದುರುವಿಕೆ, ಕೂದಲು ಹಾನಿ ಮತ್ತು ತಲೆಹೊಟ್ಟು ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ವಿಟಮಿನ್ ಎ ಸಾಸಿವೆ ಬೀಜಗಳಲ್ಲಿ ಕಂಡುಬರುತ್ತದೆ. ಇದು ನೆತ್ತಿಯನ್ನು ಪೋಷಿಸಲು ಸಹಾಯ ಮಾಡುವ ಪೋಷಕಾಂಶವಾಗಿದೆ.
ಸಾಸಿವೆಯಿಂದ ತೆಗೆದ ಎಣ್ಣೆ ಕೂದಲು ಆರೋಗ್ಯಕ್ಕೆ ಬಲು ಉಪಕಾರಿ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ನಂತರ ಕೂದಲು ಮತ್ತು ನೆತ್ತಿಯ ಮೇಲೆ ಮಸಾಜ್ ಮಾಡಿ.
ಇದು ಬೇರುಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಕೂದಲು ಕ್ರಮೇಣ ಕಪ್ಪಾಗಲು ಪ್ರಾರಂಭಿಸುತ್ತದೆ.
ಮೊದಲು ಸಾಸಿವೆಯನ್ನು ರುಬ್ಬಿ ಒಣಗಿಸಿ ಪುಡಿ ತಯಾರಿಸಿಕೊಳ್ಳಿ. ಈಗ ಶುದ್ಧವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಸಾಸಿವೆ ಪುಡಿ ಮತ್ತು ಒಂದು ಮೊಟ್ಟೆಯನ್ನು ಮಿಶ್ರಣ ಮಾಡಿ.
ಈಗ ಅದಕ್ಕೆ ತೆಂಗಿನೆಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಅದನ್ನು ಕೂದಲಿಗೆ ಬೇರುಗಳ ತನಕ ಹಚ್ಚಿ. 20 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.