ದೇಶ-ವಿದೇಶದಲ್ಲಿ ಹೊಸ ಕೊರೊನಾ ವೈರಸ್ ತಳಿ JN.1 ಜನರಲ್ಲಿ ಭಯ ಹುಟ್ಟಿಸಿದೆ.
ಈ ವೈರಸ್ ಬಗ್ಗೆ ಹಿರಿಯ ವಯಸ್ಕರು ಮತ್ತು ಮಧುಮೇಹಿಗಳು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು.
ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಅಂಗಾಂಗ ಕಸಿ ಪಡೆದವರಲ್ಲಿ ಸೋಂಕು ತೀವ್ರವಾಗುವ ಸಾಧ್ಯತೆ ಇರುತ್ತದೆ.
ಜನದಟ್ಟಣೆ ಹೆಚ್ಚಿರುವ ಕಡೆ ಮತ್ತು ಆಸ್ಪತ್ರೆಗೆ ಭೇಟಿ ನೀಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಉತ್ತಮ.
ಲಸಿಕೆಯನ್ನೇ ತೆಗೆದುಕೊಳ್ಳದ ವಯಸ್ಕರಲ್ಲಿ ಈ ಹಿಂದೆ ಕೊರೊನಾ ಸೋಂಕು ತಗುಲಿದ್ದರೆ ಅದರಿಂದಲೂ ಪ್ರತಿರೋಧಕ ಶಕ್ತಿ ಬಂದಿರುತ್ತದೆ.
ಕೊರೊನಾ ಸೋಂಕು ಬಾರದೇ ಲಸಿಕೆಯೂ ತೆಗೆದುಕೊಳ್ಳದೇ ಇದ್ದವರಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಈ ಹೊಸ ವೈರಸ್ ನಿಂದ ಕೋವಿಡ್ನ ತೀವ್ರತೆ ದೇಹದ ಇತರೆ ಆರೋಗ್ಯ ಸಮಸ್ಯೆಗಳ ಮೇಲೆ ಅವಲಂಬಿಸಿರುತ್ತದೆ.
ಸೂಕ್ತ ಮುಂಜಾಗ್ರತಾ ಕ್ರಮವನ್ನು ಅನುಸರಿಸಿದರೆ ಕೊರೊನಾ ಸೇರಿದಂತೆ ಫ್ಲೂ ತರಹದ ಉಸಿರಾಟದ ಮೂಲಕ ಹರಡುವ ಜ್ವರಗಳಿಂದಲೂ ನಿಮಗೆ ರಕ್ಷಣೆ ಸಿಗುತ್ತದೆ.