ಮನೆಯ ಸುತ್ತಮುತ್ತ ಈ ಗಿಡ ನೆಟ್ಟರೆ ಹಾವುಗಳು ಅತ್ತಕಡೆ ತಲೆನೂ ಹಾಕಲ್ಲ!

ಹಾವು ವಿರೋಧಿ ಗಿಡಗಳು

ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಭಯವಾಗುತ್ತದೆ. ಅದಕ್ಕಾಗೇ ಅವುಗಳು ಬಾರದಂತೆ ತಡೆಯಲು ಅನೇಕ ಟ್ರಿಕ್ಸ್’ಗಳನ್ನು ಬಳಕೆ ಮಾಡುತ್ತೇವೆ. ಆದರೆ ನಾವಿಂದು ಕೆಲ ಹಾವು ವಿರೋಧಿ ಗಿಡಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಲೆಮೆನ್ ಗ್ರಾಸ್

ಲೆಮೆನ್ ಗ್ರಾಸ್ ಹೆಸರೇ ಸೂಚಿಸುವಂತೆ ನಿಂಬೆ ಪರಿಮಳವನ್ನು ಹೊಂದಿರುತ್ತದೆ. ಇದರಿಂದ ಹೊರಸೂಸುವ ಸಿಟ್ರಸ್ ಪರಿಮಳ ಹಾವುಗಳಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಈ ಗಿಡಗಳು ಮನೆ ಬಳಿ ಇದ್ದರೆ, ಅತ್ತಕಡೆ ಹಾವುಗಳು ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ.

ಕಂಚಿಕಾಯಿ

ಕಂಚಿಕಾಯಿ, ಹೆರಳೆಕಾಯಿ ಎಂದೆಲ್ಲಾ ಕರೆಯಲ್ಪಡುವ ಈ ಕಾಯಿಯನ್ನು ಸಾಮಾನ್ಯವಾಗಿ ಏಷ್ಯನ್ ಪಾಕಪದ್ಧತಿಯಲ್ಲಿ ಬಳಸಲು ಬೆಳೆಯಲಾಗುತ್ತದೆ. ಇದು ಒಂದು ರೀತಿಯ ನಿಂಬೆ ಎಂದೇ ಹೇಳಬಹುದು. ಈ ಗಿಡದ ಬಲವಾದ ಪರಿಮಳವು ಹಾವುಗಳನ್ನು ದೂರವಿಡುವಂತೆ ಮಾಡುತ್ತದೆ.

ಪಾಪಸ್ ಕಳ್ಳಿ:

ಸಾಮಾನ್ಯವಾಗಿ ಹಾವುಗಳು ಮುಳ್ಳುಗಳಿರುವ ಸಸ್ಯಗಳಿಂದ ದೂರವಿರುತ್ತವೆ. ಇದನ್ನು ಮನೆಯಲ್ಲಿ ಅಥವಾ ಸುತ್ತಮುತ್ತ ಬೆಳೆಸಿದರೆ ಹಾವುಗಳು ಬರೋದಿಲ್ಲ.

ಮಗ್ವರ್ಟ್

ಕ್ರೈಸಾಂಥೆಮಮ್ ವೀಡ್ ಅಥವಾ ಮಗ್ವರ್ಟ್ ಎಂದು ಕರೆಯಲ್ಪಡುವ ಈ ಸಸ್ಯ ಹಾವು ವಿರೋಧಿ ಸಸ್ಯಗಳಲ್ಲಿ ಒಂದಾಗಿದೆ, ಈ ಗಿಡಗಳನ್ನು ಹೆಚ್ಚಾಗಿ ಉತ್ತರ ಅಮೆರಿಕಾ, ಏಷ್ಯಾ ಮತ್ತು ಉತ್ತರ ಯುರೋಪ್’ನಲ್ಲಿ ಬೆಳೆಯಳಾಗುತ್ತದೆ. ಮಗ್ವರ್ಟ್ ಕೀಟನಾಶಕ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ.

ಈರುಳ್ಳಿ ಸಸ್ಯ

ಇದು ಸಾಮಾನ್ಯವಾಗಿ ಅಡುಗೆಗೆ ಬಳಕೆ ಮಾಡುವ ತರಕಾರಿಯಾಗಿದ್ದು, ಇದು ಸಲ್ಫೋನಿಕ್’ವನ್ನು ಉತ್ಪಾದಿಸುತ್ತದೆ. ಹೀಗಾಗಿ ಈರುಳ್ಳಿ ಸಸ್ಯ ಕಂಡರೆ ಹಾವುಗಳು ಅಲ್ಲಿಂದ ಓಡಿಹೋಗುತ್ತವೆ.

ಬೆಳ್ಳುಳಿ

ಬೆಳ್ಳುಳಿ ಗಿಡಗಳನ್ನು ಬೆಳೆಸಿದರೆ, ಹಾವುಗಳನ್ನು ಯಾವುದೇ ಶ್ರಮವಿಲ್ಲದೆ ಓಡಿಸಬಹುದು. ಈ ಸಸ್ಯದಿಂದ ಉತ್ಪತ್ತಿಯಾಗುವ ವಾಸನೆಯನ್ನು ಹಾವುಗಳು ದ್ವೇಷಿಸುತ್ತವೆ. ರೆ

ದತುರಾ

ದತುರಾ ಕೂಡ ಹಾವು ವಿರೋಧಿ ಗಿಡಗಳಲ್ಲಿ ಒಂದು. ಇದರಲ್ಲಿ ಬಿಡುವ ಹೂವು ವಿಭಿನ್ನವಾಗ ವಾಸನೆಯನ್ನು ಹೊಂದಿರುತ್ತದೆ. ಇದೇ ಕಾರಣದಿಂದ ಹಾವುಗಳು ಈ ಗಿಡ ಕಂಡರೆ ಅಲ್ಲಿಂದ ಓಡಿ ಹೋಗುತ್ತವೆ

ಪುದೀನಾ

ಪುದೀನಾ ಸಸ್ಯವು ವಿಭಿನ್ನ ರೀತಿಯ ಪರಿಮಳವನ್ನು ಹೊಂದಿರುತ್ತದೆ. ಇದನ್ನು ಹಾವುಗಳು ಮತ್ತು ಇತರ ಕೀಟಗಳು ಇಷ್ಟಪಡುವುದಿಲ್ಲ. ಹೀಗಾಗಿ ಈ ಸಸ್ಯದಿಂದ ದೂರವಿರುತ್ತವೆ.

ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್ ಗಿಡಕ್ಕೆ ಯಾವುದೇ ವಾಸನೆ ಇರುವುದಿಲ್ಲ. ಆದರೆ ಅದರ ಉದ್ದವಾದ ಎಲೆಗಳನ್ನು ನೋಡಿದ ಕೂಡಲೇ ಹಾವುಗಳು ಹೆದರುತ್ತವೆ. ಇದೇ ಕಾರಣದಿಂದ ಅವುಗಳು ಅಲ್ಲಿಂದ ಓಡಿಹೋಗುತ್ತವೆ.

ಚೆಂಡು ಹೂ

ಚೆಂಡು ಹೂವಿನ ಸಸ್ಯದ ಬೇರುಗಳು ಗಾಢ ವಾಸನೆಯನ್ನು ಹೊರಸೂಸುತ್ತವೆ. ಮನೆಯಲ್ಲಿ ಅಥವಾ ಜಮೀನುಗಳಲ್ಲಿ ಈ ಗಿಡವನ್ನು ನೆಟ್ಟರೆ ಹಾವುಗಳು ಬರುವುದಿಲ್ಲ.

VIEW ALL

Read Next Story