ಹೆಚ್ಚಿನ ಜನರು ಚಳಿಗಾಲದಲ್ಲಿ ಕಿತ್ತಳೆ ತಿನ್ನಲು ಇಷ್ಟಪಡುತ್ತಾರೆ.
ಆದರೆ ಕೆಲವರು ಕಿತ್ತಳೆ ತಿನ್ನುವುದರಿಂದ ಶೀತ, ಕೆಮ್ಮು ಉಂಟಾಗುತ್ತದೆ ಎಂದು ಭಯಪಡುತ್ತಾರೆ.
ಆದರೆ ಚಳಿಗಾಲದಲ್ಲಿ ಕಿತ್ತಳೆ ತಿನ್ನುವುದು ಔಷಧಿಗಿಂತ ಕಡಿಮೆಯಿಲ್ಲ.
ಇದರಲ್ಲಿ ಹಲವಾರು ಪೋಷಕಾಂಶಗಳಿದ್ದು,ಇದರಿಂದ ಚಳಿಗಾಲದಲ್ಲಿ ಆರೋಗ್ಯವಾಗಿರಬಹುದು.
ಈ ಹುಳಿ ಹಣ್ಣನ್ನು ಚಳಿಗಾಲದಲ್ಲಿ ತಿಂದರೆ ಹಲವಾರು ಖಾಯಿಲೆಗಳಿಂದ ಮುಕ್ತಿ ಸಿಗುತ್ತದೆ.
ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇದು ನಿಮ್ಮ ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
ಕಿತ್ತಳೆಯಲ್ಲಿ ವಿಟಮಿನ್ ಸಿ ಇರುವುದರಿಂದ ಇದು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿಸುತ್ತದೆ.
ಪ್ರತಿನಿತ್ಯ ಇದನ್ನು ಸೇವಿಸಿದರೆ ಚರ್ಮದಲ್ಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಡಾರ್ಕ್ ಸರ್ಕಲ್ ಮಾಯವಾಗುತ್ತದೆ.
ವಯಸ್ಸು ಹೆಚ್ಚಾದಂತೆ ದೃಷ್ಟಿ ಕಡಿಮೆಯಾಗುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕಿತ್ತಳೆ ಸೇವನೆಯಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ.