ಪಪ್ಪಾಯಿ ಅತಿಯಾದ ಸೇವನೆ ಈ ರೋಗಕ್ಕೆ ಕಾರಣ !
ಪಪ್ಪಾಯಿ ಅತಿಯಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮಿತವಾಗಿ ತಿಂದರಷ್ಟೇ ಇದರಿಂದ ಆರೋಗ್ಯಕ್ಕೆ ಲಾಭವಿದೆ.
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಹೆಚ್ಚು ಸೇವಿಸಿದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
ಪಪ್ಪಾಯಿ ಗುಣಲಕ್ಷಣಗಳು ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಪಪ್ಪಾಯಿ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಕೆಲವರಿಗೆ ಚರ್ಮದ ಮೇಲೆ ತುರಿಕೆ, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
ಪಪ್ಪಾಯಿ ಹಣ್ಣನ್ನು ಅತಿಯಾಗಿ ತಿನ್ನುವುದರಿಂದ ಔಷಧಿ ಸೇವಿಸುವವರಿಗೆ ಹಲವಾರು ತೊಂದರೆಗಳು ಉಂಟಾಗುತ್ತವೆ.
ಪಪ್ಪಾಯಿಯಲ್ಲಿರುವ ಲ್ಯಾಟೆಕ್ಸ್ ಎಂಬ ವಸ್ತುವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಕೆಲವು ಅಧ್ಯಯನಗಳ ಪ್ರಕಾರ, ಗರ್ಭಿಣಿಯರು ಹೆಚ್ಚು ಪಪ್ಪಾಯಿಯನ್ನು ಸೇವಿಸಿದರೆ ಗರ್ಭಪಾತದ ಅಪಾಯವಿದೆ.
ಪಪ್ಪಾಯಿ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.